ಬಂಟ್ವಾಳ ತಾಲ್ಲೂಕಿನ ಫರಂಗಿಪೇಟೆ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ಸಂಜೆ ರಸ್ತೆ ದಾಟುತ್ತಿದ್ದ ಸಂದರ್ಭ ಲಾರಿ ಪಾದಚಾರಿಯ ಮೇಲೆ ಹರಿದು ಭೀಕರ ಅಪಘಾತ ಸಂಭವಿಸಿದೆ .
ಪಾದಚಾರಿಯೊಬ್ಬರನ್ನು ಬಲಿ ತೆಗೆದುಕೊಂಡ ಲಾರಿ.

ಮಂಗಳೂರು ಕಡೆಯಿಂದ ವೇಗವಾಗಿ ಬಿಸಿರೋಡ್ ಕಡೆಗೆ ಮರಳು ತುಂಬಿಸಿಕೊಂಡು ಬರುತ್ತಿದ್ದ ಲಾರಿ ಅರ್ಕುಳ ಯಶಸ್ವಿ ಹಾಲ್ ಸಮೀಪ ರಸ್ಥೆ ದಾಟುತ್ತಿದ್ದ ವ್ಯಕ್ತಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಅಪಘಾತದಲ್ಲಿ ಮ್ರತರಾದವರು ಫರಂಗಿಪೇಟೆ ಸಮೀಪದ ಅರ್ಕುಳ ನಿವಾಸಿ ಪದ್ಮನಾಭ ಪೂಜಾರಿ (58) ಎಂದು ಗುರುತಿಸಲಾಗಿದೆ. ಅಪಘಾತದ ತೀವ್ರತೆ ಎಷ್ಟಿತೆಂದರೆ ಶರೀರದ ಅಂಗಂಗಳು ಚೂರುಚೂರಾಗಿ ತಲೆಬುರುಡೆ ಮಾತ್ರ ನೋಡಿ ಗುರುತು ಹಿಡಿಯಲು ಸಾಧ್ಯವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಕಂಕನಾಡಿ ಪೋಲಿಸರು ಕೇಸ್ ದಾಖಲಿಸಿದ್ದಾರೆ.
