ಮಂಗಳೂರು: ಸಮುದ್ರಕ್ಕೆ ಸ್ನಾನ ಮಾಡಲು ಇಳಿದ ಇಬ್ಬರನ್ನು ತಡೆದ ವಿಚಾರಕ್ಕೆ ಸಂಬಂಧಿಸಿ ಇತ್ತಂಡಗಳ ನಡುವೆ ನಡೆದ ಹೊಡೆದಾಟ ಘಟನೆಗೆ ಸಂಬಂಧಿಸಿದಂತೆ ನಾಲ್ವರನ್ನು ಉಳ್ಳಾಲ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಘಟನೆ ಬೆನ್ನಲ್ಲೇ ಇನ್ನೋರ್ವನಿಗೆ ಅಪರಿಚಿತ ತಂಡವೊಂದು ಹಲ್ಲೆ ನಡೆಸಿರುವ ಘಟನೆ ಮೊನ್ನೆ ತಡರಾತ್ರಿ ವೇಳೆ ಜರಗಿದೆ.
ಮೊಗವೀರಪಟ್ನದ ವಾಸುದೇವ (35) ವಿಜಯ್(40) ಜಿತೇಂದ್ರ(40) ಬಂಧಿತರು.
001 (1)
ದೇರಳಕಟ್ಟೆ ನಿವಾಸಿಗಳಾದ ಅಲ್ಫಾಝ್, ನೌಷಾದ್ , ಸಿನಾನ್ ಸಹಿತ ಐವರ ತಂಡ ಉಳ್ಳಾಲ ಮೊಗವೀರಪಟ್ನ ಸಮುದ್ರ ತೀರಕ್ಕೆ ವಿಹಾರಕ್ಕೆಂದು ಬಂದಿದ್ದರು. ಅವರು ಸಮುದ್ರಕ್ಕೆ ಬಿದ್ದ ಚೆಂಡನ್ನು ತೆಗೆಯಲು ಹೋದ ವಿಚಾರದಲ್ಲಿ ಇತ್ತಂಡಗಳ ಮಧ್ಯೆ ವಾಗ್ವಾದ ನಡೆದು, ಹೊಡೆದಾಟ ಸಂಭವಿಸಿ, ಇಬ್ಬರು ಗಾಯಗೊಂಡಿದ್ದರು.
ಪ್ರತೀಕಾರ: ಭಾನುವಾರ ಸಂಜೆ ಘಟನೆ ನಡೆದ ಬೆನ್ನಲ್ಲೇ ಉಳ್ಳಾಲ ಸಮೀಪ ನಡೆದುಕೊಂಡು ಹೋಗುತ್ತಿದ್ದ ಅಶೋಕ್ (35) ಎಂಬವರಿಗೆ ತಂಡವೊಂದು ಕಲ್ಲೆಸೆದಿತ್ತು. ಇದನ್ನು ಆಕ್ಷೇಪಿಸಿ ಕಲ್ಲೆಸೆದ ತಂಡವನ್ನು ವಿಚಾರಿಸಿದಾಗ , ಅವರು ಗುಂಪಾಗಿ ಅಶೋಕ್ ಅವರಿಗೆ ಗಂಭೀರವಾಗಿ ಹಲ್ಲೆ ನಡೆಸಿದ್ದಾರೆ. ಅಶೋಕ್ ಅವರು ಅಪಘಾತದಲ್ಲಿ ಕಾಲು ಕಳೆದುಕೊಂಡವರಾಗಿದ್ದು, ತಾತ್ಕಾಲಿಕ ಕಾಲು ಜೋಡಣೆ ಮೂಲಕ ನಡೆದುಕೊಂಡು ಹೋಗುತ್ತಿದ್ದರು. ಅನ್ವರ್ ಸಹಿತ ತಂಡ ಹಲ್ಲೆ ನಡೆಸಿರುವ ಬಗ್ಗೆ ದೂರಿನಲ್ಲಿ ತಿಳಿಸಿದ್ದು, ಮೊಗವೀರಪಟ್ನದಲ್ಲಿ ನಡೆದ ಘಟನೆಗೆ ಪ್ರತೀಕಾರವಾಗಿ ಹಲ್ಲೆ ನಡೆದಿರುವ ಕುರಿತು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

By suddi9

Leave a Reply

Your email address will not be published. Required fields are marked *