ಕಿನ್ನಿಗೋಳಿ: ಉತ್ತಮ ಶಿಕ್ಷಣದ ಜೊತೆಗೆ ದಾರ್ಮಿಕ ನಂಬಿಕೆಗಳನ್ನು ಮೈಗೂಡಿಸಿಕೊಂಡಾಗ ಜೀವನದಲ್ಲಿ ಯಶಸ್ಸು ಗಳಿಸಲು ಸಾದ್ಯ ಎಂದು ಬೆಳಪು ದೇವಿಪ್ರಸಾದ್ ಶೆಟ್ಟಿ ಹೇಳಿದರು ಅವರು ಕಿನ್ನಿಗೋಳಿಯ ಮೂರು ಕಾವೇರಿಯ ಮಹಮ್ಮಾಯಿ ದೇವಸ್ಥಾನದ ಮಾರಿ ಪೂಜಾ ಮಹೋತ್ಸವದ ದಾರ್ಮಿಕ ಸಭಾ ಕಾರ್ಯ ಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು, ಏಳಿಂಜೆ ದೇವಳದ ಅರ್ಚಕ ಗಣೇಶ್ ಭಟ್ ಶುಭಾಶಂಸನೆಗೈದರು.
muru kaveeri mari pooje
ಜಿಲ್ಲಾ ಪಂಚಾಯಿತಿ ಸದಸ್ಯ ಈಶ್ವರ್ ಕಟೀಲ್, ಕಿನ್ನಿಗೋಳಿ ಯುಗಪುರುಷ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ, ಕೆ. ವಿ. ಶೆಟ್ಟಿ ಕೊಡೆತ್ತೂರು, ಗುರಿಕಾರ ಬಾಬುಗೌಡ ಮತ್ತಿತರರು ಉಪಸ್ಥಿತರಿದ್ದರು.
ಉಮೇಶ್ ಬಂಗೇರ ಸ್ವಾಗತಿಸಿ ಕೃಷ್ಣಪ್ಪ ವಂದಿಸಿದರು. ದಿವಾಕರ ಕರ್ಕೇರಾ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *