ಬಂಟ್ವಾಳ : ಬಡಜನರ ಶ್ರೇಯೋಭಿವೃದ್ದಿಯೇ ರಾಜ್ಯ ಸರ್ಕಾರದ ಮುಖ್ಯ ಉದ್ದೇಶವಾಗಿದ್ದು, ಇದಕ್ಕೆ ಪೂರಕವಾಗಿ ಅನ್ನಭಾಗ್ಯದಂತಹಾ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ಫರಂಗಿಪೇಟೆಯಲ್ಲಿ ಪುದು ಗ್ರಾಮಪಂಚಾಯತ್ ವತಿಯಿಂದ ಸೋಮವಾರ ಬೆಳಿಗ್ಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಉಚಿತ್ ಗ್ಯಾಸ್ ವಿತರಣೆ ಹಾಗೂ ಬಿಪಿಎಲ್ ಕಾಡರ್್ ದಾರರಿಗೆ ಅನ್ನಭಾಗ್ಯದ ಉಚಿತ ಅಕ್ಕಿ ವಿತರಣೆಯನ್ನು ನೆರವೇರಿಸಿ ಅವರು ಮಾತನಾಡಿದರು.

farangi pete
ಕಾಂಗ್ರೇಸ್ ಸರ್ಕಾರ ತನ್ನ ಪ್ರಣಾಳಿಕೆಯಲ್ಲಿ ನೀಡಿದ ಬಹುತೇಕ ಭರವಸೆಗಳನ್ನು ಸಿದ್ದರಾಮಯ್ಯ  ಸರಕಾರ ಕೇವಲ ಎರಡು ವರ್ಷಗಳಲ್ಲಿಯೇ ಈಡೇರಿಸಿದ್ದು, ಆಹಾರಖಾತೆ ಸಚಿವ ದಿನೇಶ್ ಗುಂಡೂರಾವ್ ಅವರ ಜನಪರ ಕಾಳಜಿಯೂ ಇದರಲ್ಲಿ ಅಡಗಿದೆ ಎಂದರು. ಸ್ವಾಭಿಮಾನಿ-ಸಾಮರಸ್ಯ ಸಮಾಜ ನಿರ್ಮಾಣ ರಾಜ್ಯ ಸರ್ಕಾರದ ಗುರಿಯಾಗಿದ್ದು, ರಾಜ್ಯಸರ್ಕಾರ ಈ ಕಾರ್ಯಕ್ರಮಗಳಿಗೆ ಜನತೆಯ ಸಹಕಾರವೂ ಅಗತ್ಯ ಎಂದರು.

ಗ್ರಾ.ಪಂ.ಅಧ್ಯಕ್ಷೆ ಲಕ್ಷ್ಮೀ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಜಿ.ಪಂ.ಸದಸ್ಯ ಉಮ್ಮರ ಫಾರೂಕ್,ತಾ.ಪಂ.ಸದಸ್ಯ ಆಸಿಫ್ ಇಕ್ಬಾಲ್, ಉಪಾಧ್ಯಕ್ಷ ಮಹಮ್ಮದ್ ಶರೀಫ್, ಸದಸ್ಯರಾದ ಅಖ್ತರ್ ಹುಸೇನ್, ರಮ್ಲಾನ್, ಎಂ.ಕೆ.ಖಾದರ್, ಆತಿಕಾ, ಆಸಿರ್, ಜಾಹಿರ್, ಲತೀಫ್, ಲೀನಾ, ಹಿಲ್ಡಾ, ಅಬ್ದುಲ್ ಖಾದರ್, ಸುಲೈಮಾನ್, ನಳಿನಾಕ್ಷಿ, ಪ್ರಮುಖರಾದ ಟಿ,ಕೆ.ಬಶೀರ್, ಪಂಚಾಯತ್ ಅಭಿವೃದ್ದಿ ಅಧಿಕಾರಿ ಸವಿತಾ, ಸಿಬ್ಬಂದಿಗಳಾದ ಅಬ್ದುಲ್ ಸಲಾಂ, ವಿನಯ ಮೊದಲಾದವರು ಉಪಸ್ಥಿತರಿದ್ದರು. ಗ್ರಾಮದ ಹಲವು ಎಸ್.ಸಿ/ಎಸ್.ಟಿ ಫಲಾನುಭವಿಗಳಿಗೆ ಸಚಿವ ಯು.ಟಿ.ಖಾದರ್ ಗ್ಯಾಸ್ಸ್ಟವ್ ಹಾಗೂ ಬಿಪಿಎಲ್ ಕಾಡರ್್ದಾರರಿಗೆ ಉಚಿತ ಅಕ್ಕಿ ವಿತರಿಸಿದರು. ಗ್ರಾ.ಪಂ. ಸದಸ್ಯ ಅಬ್ದುಲ್ ಖಾದರ್ ಸ್ವಾಗತಿಸಿದರು, ಉಪಾಧ್ಯಕ್ಷ ಮಹಮ್ಮದ್ ಶರೀಫ್ ವಂದಿಸಿದರು. ಎಫ್.ಖಾದರ್ ಕಾರ್ಯಕ್ರಮ ನಿರ್ವಹಿಸಿದರು.

By Suddi9

Leave a Reply

Your email address will not be published. Required fields are marked *