ಬಂಟ್ವಾಳ: ದೇವಸ್ಯ ಪಡೂರು ಗ್ರಾಮದ ಅಲ್ಲಿಪಾದೆಯ ಬಳಿಯ ಕೇದಗೆ ಎಂಬಲ್ಲಿ ಕಾಡಿನ ಮಧ್ಯೆ ದೈವಸ್ಥಾನವೊಂದರ ಅವಶೇಷಗಳು ಬೆಳಿಕಿಗೆ ಬಂದಿದೆ. ಮರಗಳ ಸಮೂಹದ ಬುಡದಲ್ಲಿ ಪಾಣಿಪೀಠದಂತಹ ಕಲ್ಲು, ದೇವರ ವಿಗ್ರಹದಂತಿರುವ ರಚನೆ, ಗಡಿಕಲ್ಲು ಕಂಡು ಬಂದಿದ್ದು ಸ್ಥಳೀಯರಲ್ಲಿ ಕುತೂಹಲ ಮೂಡಿಸಿದೆ. ಪ್ರಶ್ನೆಯೊಂದರಲ್ಲಿ ಕಂಡು ಬಂದತೆ ಇದು ಬ್ರಹ್ಮಬೈದರ್ಕಳ ಗರಡಿಯ ಅವಶೇಷಗಳಿರಬೇಕೆಂದು ಶಂಕಿಸಲಾಗಿದೆ.

ಸಿಲೆ
BTW_MAY3_1B
ಸ್ಥಳೀಯ ನಿವಾಸಿ ಐತಪ್ಪ ಬಂಗೇರಾ ಎಂಬವರು ಸೊಪ್ಪು ಕಡಿಯಲು ಕಾಡಿಗೆ ಬಂದಿದ್ದಾಗ ಇಲ್ಲಿ ದೈವಸ್ಥಾನಕ್ಕೆ ಸಂಬಂಧಿಸಿದ ಅವಶೇಷಗಳು ಇರುವುದನ್ನು ಗುರುತಿಸಿದ್ದರು. ಮಣ್ಣಿನ ಪಾಪೆ, ಕಡ್ತಲೆ, ಮಣಿಗಂಟೆ ಇರುವುದನ್ನು ನೋಡಿದ್ದರು. ನಾಗಪ್ರತಿಷ್ಠಗಾಗಿ ಕೇದಗೆಗೆ ಬಂದಿದ್ದ ಜೋಯಿಷರಲ್ಲಿ ಪ್ರಶ್ನೆಯ ಮೂಲಕ ಈ ಬಗ್ಗೆ ಕೇಳಿದಾಗ ಇದು ಕೋಟಿ ಚೆನ್ನಯರಿದ್ದ ಗರಡಿ, ಇಲ್ಲಿ ಹಲವಾರು ದೈವಗಳು ನೆಲನಿಂತಿವೆ ಎನ್ನುವ ಮಾಹಿತಿಯನ್ನು ನೀಡಿದ್ದರು. ಆ ಬಳಿಕವೂ ಇತರ ಕಡೆಗಳಲ್ಲಿ ಪ್ರಶ್ನೆ ಇಟ್ಟಾಗಲೂ ಇಲ್ಲಿ ದೈವಸ್ಥಾನವೊಂದು ಪಾಳು ಬಿದ್ದಿರುವ ಬಗ್ಗೆ ತಿಳಿದು ಬರುತ್ತಿತ್ತು. ಆದರೆ ಅದನ್ನು ಜೀಣರ್ೋದ್ದಾರ ಮಾಡಿಸುವಷ್ಟು ಸಾಮಥ್ರ್ಯ ಸ್ಥಳೀಯರಲ್ಲಿ ಇಲ್ಲದೆ ಇರುವುದರಿಂದ ಅದು ಹಾಗೆಯೇ ಉಳಿದಿದೆ ಎನ್ನುತ್ತಾರೆ ಇಲ್ಲಿನ ಗ್ರಾಮಸ್ಥರು. ಇದೀಗ ಈ ಸುದ್ದಿ ಗ್ರಾಮದಾದ್ಯಂತ ಹಬ್ಬಿದೆ. ಸ್ಥಳೀಯರಾದ ಚಂದ್ರಹಾಸ ನೂತರ್ಾಡಿ, ಜಯಪೂಜಾರಿ, ಚಂದ್ರಶೇಖರ ಕೇದಗೆ, ಪದ್ಮನಾಭ ಮರಾಯಿತೊಟ್ಟು, ತಿಮ್ಮಯ್ಯ ಮೂಲ್ಯ, ಭೋಜ ಕುಲಾಲ್, ವಾಸು ಪೂಜಾರಿ ಅಲ್ಲಿಪಾದೆ, ದಯಾನಂದ ಸಾಲ್ಯಾನ್, ವಿಠಲ ಪೂಜಾರಿ ಪುಂಡಿಬೈಲು ಸ್ಥಳಕ್ಕೆ ಭೇಟಿ ನೀಡಿದ್ದರು. ಕೆಲ ದಿನಗಳ ಹಿಂದೆಯಷ್ಟೇ ನರಿಕೊಂಬಿನ ಯುವಕರ ತಂಡ ಇಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ತೆರಳಿದೆ. ಈ ಬಗ್ಗೆ ಸ್ಥಳ ಪ್ರಶ್ನೆ ಇಟ್ಟು ಇದರ ಪೂರ್ವಪರ ತಿಳಿದುಕೊಳ್ಳಲು ಸ್ಥಳೀಯರು ನಿರ್ಧರಿಸಿದ್ದಾರೆ.

By Suddi9

Leave a Reply

Your email address will not be published. Required fields are marked *