ಬಂಟ್ವಾಳ: ಇಲ್ಲಿನ ಪುರಸಭಾ ವ್ಯಾಪ್ತಿಯ ಬಂಟ್ವಾಳ ಕಸ್ಬಾ ಗ್ರಾಮದ ಜಕ್ರಿಬೆಟ್ಟುವಿನಲ್ಲಿರುವ ಅಲೆಮಾರಿಗಳ ಹಾಡಿಯಲ್ಲಿ ಬುಧವಾರ ರಾತ್ರಿ ಪುರಸಭಾ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ಅವರ ನೇತೃತ್ವದಲ್ಲಿ ಪುರಸಭಾ ಅಧಿಕಾರಿಗಳು ಸಾಮಾಜಿಕ ಹಾಗೂ ಶೈಕ್ಷಣಿಕ ಗಣತಿ ನಡೆಸಿದರು. ಮೂಲತಃ ಮರಾಠಿ ಭಾಷಿಕರಾದ ಬೆಸ್ತರ ಕುಟುಂಬದ ಈ ಅಲೆಮಾರಿಗಳು ವೃತ್ತಿ ನಿಮಿತ್ತ ಮೈಸೂರಿನಿಂದ ಇಲ್ಲಿಗೆ ಬಂದು ಜಕ್ರಿಬೆಟ್ಟು ಬಳಿ ಟೆಂಟ್ ಹಾಕಿ ಜೀವಿಸುತ್ತಿದ್ದಾರೆ.
BTW_APL29_4
10ಕ್ಕಿಂತಲೂ ಹೆಚ್ಚು ಕುಟುಂಬದ ಮಕ್ಕಳು, ಮಹಿಳೆಯರು ಸೇರಿ 40ಕ್ಕಿಂತಲೂ ಹೆಚ್ಚು ಮಂದಿ ಈ ಗುಂಪಿನಲ್ಲಿದ್ದಾರೆ ಹಗಲಿನಲ್ಲಿ ಕೂಲಿ ಕೆಲಸಕ್ಕೆ ತೆರಳುವ ಕಾರಣಕ್ಕಾಗಿ ಅಲೆಮಾರಿಗಳ ಹಾಡಿಯಲ್ಲಿ ರಾತ್ರಿ ವೇಳೆ ಸಮೀಕ್ಷೆ ನಡೆಸಲಾಗುತ್ತಿದೆ. ಪುರಸಭೆಯ ಸಮುದಾಯ ಸಂಘಟಕಿ ಉಮಾವತಿ, ಸಿಬ್ಬಂದಿಗಳಾದ ರಮೇಶ, ರಾಘವೇಂದ್ರ ಗಣತಿ ಕಾರ್ಯದಲ್ಲಿ ಭಾಗವಹಿಸಿದ್ದರು.

By suddi9

Leave a Reply

Your email address will not be published. Required fields are marked *