ಬಂಟ್ವಾಳ: ಕಳೆದ 6 ತಿಂಗಳಿನಿಂದ ವಾರ್ಡ್ ಗೆ ಮನೆ-ಮನೆ ಕಸ ಸಂಗ್ರಹ ವಾಹನ ಬರುತ್ತಿಲ್ಲ. ಈ ಹಿನ್ನೆಲೆಯಲ್ಲಿ ಬೀದಿ ಬದಿ ವಠಾರ ತ್ಯಾಜ್ಯ ವಸ್ತುಗಳು ರಾಶಿ ಬಿದ್ದಿದೆ.
ಚರಂಡಿ ತ್ಯಾಜ್ಯ ನೀರು ನಿರ್ವಹಣೆಯಾಗುತ್ತಿಲ್ಲ ಎಂದು ಆರೋಪಿಸಿದ ಬಂಟ್ವಾಳ, ಕೆಳಗಿನಪೇಟೆ ವಾಡರ್್ ಗ್ರಾಮಸ್ಥರು ಬುಧವಾರ ಪುರಸಭಾ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿದರು.
ಮನೆ-ಮನೆ ಕಸ ಸಂಗ್ರಹ ವಾಹನ ಬಾರದೇ ಇರುವುದರಿಂದ ಆಗುತ್ತಿರುವ ತೊಡಕಿನ ಬಗ್ಗೆ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ಅವರ ಮುಂದೆ ವಿವರಣೆ ನೀಡಿದ ವಾ ರ್ಡ್ ಪ್ರಮುಖ ನಾಗರಿಕರು, ಪುರಸಭೆಯ ಅಸಮರ್ಪಕತೆಯಿಂದಾಗಿ ಮಕ್ಕಳು, ಹಿರಿಯ ನಾಗರಿಕರು ಸಾಂಕ್ರಾಮಿಕ ರೋಗಗಳಿಗೆ ಗುರಿಯಾಗುತ್ತಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದರು.
15FMuthige
ವಾರ್ಡ್ ಬೀದಿಗಳನ್ನು ಪ್ರತಿನಿತ್ಯ ಗುಡಿಸಬೇಕು. ದಿನಕ್ಕೊಮ್ಮೆಯಾದರೂ ಆರೋಗ್ಯ ಅಧಿಕಾರಿ, ಸಿಬ್ಬಂದಿಗಳು ವಾರ್ಡ್ ಭೇಟಿ ನೀಡಬೇಕೆನ್ನುವ ನಿಯಮ ಇದ್ದರೂ, ಯಾವ ವಾಡರ್್ನಲ್ಲಿ ಈ ಕಾರ್ಯಕ್ರಮ ನಡೆಸಲಾಗುತ್ತಿದೆ. ನಾಗರಿಕರಿಂದ ತೆರಿಗೆ ಹಣ ಸಂಗ್ರಹಿಸುತ್ತಿರುವ ಪುರಸಭೆಗೆ ಆರೋಗ್ಯ ಪರಿಸರವನ್ನು ನಿರ್ಮಿಸಲು ಏಕೆ ಸಾಧ್ಯವಾಗುತ್ತಿಲ್ಲ ಎಂದು ಪ್ರಶ್ನಿಸಿದರು. ಪ್ರತೀ 2 ದಿನಕ್ಕೊಮ್ಮೆಯಾದರೂ ಆರೋಗ್ಯ ಅಧಿಕಾರಿ ವಾರ್ಡ್ಗೆಗೆ ಭೇಟಿ ನೀಡಿ ಅಲ್ಲಿನ ಕಸ ನಿರ್ವಹಣೆ, ಆರೋಗ್ಯ, ಪರಿಸರಕ್ಕೆ ಸಂಬಂಧಿಸಿದ ಸಮಸ್ಯೆಯನ್ನು ಪರಿಶೀಲಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು.
ಮನೆ-ಮನೆ ಕಸಸಂಗ್ರಹಕ್ಕೆ 2 ಬಾರಿ ಟೆಂಡರ್ ಕರೆಯಲಾಗುತ್ತಿದ್ದರೂ, ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗಿಲ್ಲ. ಅಧ್ಯಕ್ಷರು ಹಾಗೂ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ತಕ್ಷಣ ಪರಿಹಾರ ಕ್ರಮ ಜರಗಿಸಲಾಗುವುದು ಎಂದು ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ತಿಳಿಸಿದರು. ವಾರದಲ್ಲಿ 2-3 ದಿನಗಳಿಗೊಮ್ಮೆ ಪ್ರತೀ ವಾರ್ಡ್ಗೆ ಭೇಟಿ ನೀಡಿ ವರದಿ ಸಲ್ಲಿಸಲು ಮುಖ್ಯಾಧಿಕಾರಿಗೆ ಸೂಚನೆ ನೀಡಲಾಗಿದೆ. ಆರೋಗ್ಯಾಧಿಕಾರಿಗಳ ಪರಿಶೀಲನಾ ವರದಿಯನ್ನು ವೀಕ್ಷಿಸಿ ಮುಂದಿನ ಕಾರ್ಯಕ್ರಮ ರೂಪಿಸಲಾಗುವುದು ಎಂದು ಪುರಸಭಾಧ್ಯಕ್ಷೆ ವಸಂತಿ ಚಂದಪ್ಪ ಪ್ರತಿಕ್ರಿಯಿಸಿದರು.
ಬಂಟ್ವಾಳ ಕೆಳಗಿನಪೇಟೆ ಪುರಸಭಾ ಸದಸ್ಯ ಮುನೀಶ್ ಅಲಿ, ವಾರ್ಡ್ ಪ್ರಮುಖರಾದ ಅಬ್ದುಲ್ ರಹಿಮಾನ್, ಸಾಧಿಕ್ ಬಂಟ್ವಾಳ, ಬಿ.ಎಂ.ಶಾಫಿ, ಇಸ್ಮಾಯಿಲ್ ಮತ್ತಿತತರು ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ಅವರಿಗೆ ಮನವಿ ಸಲ್ಲಿಸಿದರು. ಮನೆ-ಮನೆ ಸಂಗ್ರಹ ಕಾರ್ಯ ಇನ್ನೂ ವಿಳಂಬವಾದಲ್ಲಿ ನಿರ್ವಹಣೆಯಾಗದ ಕಸವನ್ನು ಕಚೇರಿಯ ಮುಂದೆ ರಾಶಿ ಹಾಕಿ ಧರಣಿ ನಡೆಸಲಾಗುವುದು ಎಂದು ನಾಗರಿಕ ಪ್ರಮುಖರು ಎಚ್ಚರಿಸಿದ್ದಾರೆ.
ಪರಿಸರ ಸಚಿವರ ಕ್ಷೇತ್ರದಲ್ಲೇ ನಿರ್ಲಕ್ಷ್ಯ!
ರಾಜ್ಯದ ಪರಿಸರ ಸಚಿವರಾದ ಬಿ.ರಮಾನಾಥ ರೈ ಅವರು ಸ್ವಕ್ಷೇತ್ರದಲ್ಲೇ ಪುರಸಭಾ ಅಧಿಕಾರಿಗಳು ಇಷ್ಟೊಂದು ನಿರ್ಲಕ್ಷ್ಯ ವಹಿಸಿದರೆ ಹೇಗೆ? ಹಾಗಾದರೆ ಉಳಿದ ತಾಲೂಕಿನ ತ್ಯಾಜ್ಯ ನಿರ್ವಹಣೆ ಹೇಗಿರಬಹುದು? ತ್ಯಾಜ್ಯ ನಿರ್ವಹಣೆಯ ಬಗ್ಗೆ ಅಧಿಕಾರಿಗಳು ವಿಶೇಷ ಕಾಳಜಿ ವಹಿಸಬೇಕು. ಮಾದರಿ ಯೋಜನೆಯನ್ನು ರೂಪಿಸಬೇಕು. ಆಗ ರಾಜ್ಯದಲ್ಲೇ ಪರಿಸರ ಸಂರಕ್ಷಣೆಯಲ್ಲಿ ಪುರಸಭೆ ಮಾದರಿ ಸ್ಥಾನ ಪಡೆಯಬಹುದು ಎಂದು ಗ್ರಾಮಸ್ಥರು ಸಲಹೆ ನೀಡಿದರು.

By Suddi9

Leave a Reply

Your email address will not be published. Required fields are marked *