ಬಂಟ್ವಾಳ : ದ.ಕ.ಜಿ.ಪಂ ಹಿ. ಪ್ರಾ. ಶಾಲೆ ಬ್ರಹ್ಮರಕೂಟ್ಲು ಶಾಲೆಯಲ್ಲಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಹಾಗೂ ಹಳೆ ವಿದ್ಯಾರ್ಥಿಗಳ ವತಿಯಿಂದ ನಿವೃತ್ತ ಶಿಕ್ಷಕಿಯರಾದ ಸುಮಾರು ಶಿಕ್ಷಣ ಕ್ಷೇತ್ರದಲ್ಲಿ 34 ವರ್ಷ ಸುದೀರ್ಘ ಸೇವೆಗೈದ ಶ್ರೀಮತಿ ಪದ್ಮಾಕ್ಷಿ ಮತ್ತು ಶಿಕ್ಷಣದಲ್ಲಿ 39 ವರ್ಷ ಸುದೀರ್ಘ ಸೇವೆಗೈದ ಶ್ರೀಮತಿ ದೇವಕಿ.ಕೆ ಇವರಿಗೆ ತುಂಬೆ ತಾ.ಪಂ ಸದ್ಯಸೆಯಾದ ಅನಿತಾ ಮಾಧವ್ ಶಾಲು ಹೋದಿಸಿ ಫಲಪುಷ್ಪ ನೀಡಿ ಸನ್ಮಾನಿಸಿದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ರಾಜಶೇಖರ ರೈ ದೀಪ ಬೇಳಗಿಸಿದರು. ವೇದಿಕೆಯಲ್ಲಿ ಹಸನಬ್ಬ ಬ್ರಹ್ಮರಕೂಟ್ಲು, ಎಸ್.ಡಿ.ಎಂ.ಸಿ ಅದ್ಯಕ್ಷೆ ಶ್ರೀಮತಿ ಕುಸುಮ, ರಾಮ ಕುಲಾಲ್ ಕಂಜೆತ್ತೂರು, ಗಿರಿಯಪ್ಪ ಬದ್ಯಾರ್, ಮುಖ್ಯಾಶಿಕ್ಷಕಿ ಶ್ರೀಮತಿ ಪ್ರೀತಿ, ಶ್ರೀಮತಿ ಚಂದ್ರಾವತಿ, ಶ್ರೀಮತಿ ವಿಮಲ ಇವರುಗಳು ಉಪಸ್ಧಿತಿಯಲ್ಲಿದ್ದರು.
