ಬಂಟ್ವಾಳ : ಬಂಟ್ವಾಳ ತುಂಬೆ ಮತ್ತು ಕಳ್ಳಿಗೆ ಗ್ರಾಮದ ಎಸ್.ಸಿ ಮತ್ತು ಎಸ್.ಟಿ ಪರಿಶಿಷ್ಠ ಜಾತಿಮತ್ತು ಪರಿಶಿಷ್ಠ ಪಂಗಡದವರಿಗೆ 20 ಮಂದಿಗೆ ಉಚಿತ ಗ್ಯಾಸ್ ವಿತರಣೆಯನ್ನು ತುಂಬೆ ಗ್ರಾ.ಪಂ ಕಛೇರಿಯಲ್ಲಿ ನಡೆಯಿತ್ತು.

ಗ್ರಾ.ಪಂ ಅಧ್ಯಕ್ಷರಾದ ಶ್ರೀ ಮಹಮ್ಮದ್ ವಳವೂರು ಗ್ಯಾಸ್ ವಿತರಣೆ ಮಾಡಿ ಮಹಿಳೆಯರು ಹೆದರಿಕೆ ಇಲ್ಲದೆ ಗ್ಯಾಸ್‍ನ್ನು ಜಾಗೃತೆಯಿಂದ ಉಪಯೋಗಿಸಬೇಕು. ಬಂಟ್ವಾಳ ತಾಲೂಕಿನಲ್ಲಿ ಪ್ರ ಪಥಮ ಬಾರಿಗೆ ತುಂಬೆ ಗ್ರಾಮ ಪಂ ಉಚಿತ ನೀಡಿದೆ. ಇನ್ನುಂದೆ ಸರಕಾರದಿಂದ ಸೀಮೆ ಎಣ್ಣೆ ದೂರಕುದಿಲ್ಲ. ಇದರಿಂದ ಸೀಮೆ ಎಣ್ಣೆ ಮುಕ್ತ ಗ್ರಾಮ ಪಂ ಮಾಡಬೇಕು. ಸರಕಾರದಿಂದ ಇನ್ನಿತರ ಸವಲತ್ತುಗಳನ್ನು ನೀವು ಪಡೆಯಬೇಕೆಂದು ಹೇಳಿದರು.ವೇದಿಕೆಯಲ್ಲಿ ಗ್ರಾ ಪಂ ಸದಸ್ಯರಾದ ಪ್ರವೀಣ್ ಬಿ ತುಂಬೆ, ಶ್ರೀಮತಿ ರತ್ನ, ಆತೀಕ ಬಾನು ಮತ್ತು ಗ್ರಾ ಪಂ ಕಾರ್ಯದರ್ಶಿ ಶಿವಲಾಲ್ ಚೌಹನ್, ಇವರುಗಳ ಉಪಸ್ಧಿತಿಯಲ್ಲಿ ಗ್ಯಾಸ್‍ನ್ನು ವಿತರಣೆ ಮಾಡಿದರು.
