ಬಂಟ್ವಾಳ : ಶ್ರೀ ಸದಾಶಿವ ದೇವಸ್ಥಾನ ಈಶ್ವರಮಂಗಲ ಸಜಿಪ ಮೂಡ ಗ್ರಾಮದ ಇದರ ಜೀರ್ಣೋದ್ಧಾರದ ಅಂಗವಾಗಿ ನೂತನವಾಗಿ ಗರ್ಭಗುಡಿ ತೀರ್ಥಮಂಟಪ ನಿರ್ಮಾಣಗೊಳ್ಳುತ್ತಿದ್ದು ಮಾ.7ಮಂಗಳವಾರದಂದು ವಾಸ್ತುಶಿಲ್ಪ ಶಾಸ್ರ್ತಜ್ಞ ಎಂ.ಎಸ್.ಪ್ರಸಾದ್ ಭಟ್ ಮುನಿಯಂಗಳ ಕ್ಷೇತ್ರಕ್ಕೆ ಭೇಟಿ ನೀಡಿ ಕಾಮಗಾರಿ ವೀಕ್ಷಿಸಿ ಮಾರ್ಗದರ್ಶನ ಮಾಡಿದರು.

ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಸದಾನಂದ ಪೂಂಜ , ಸಜಿಪ ಮೂಡ ಗ್ರಾ.ಪಂ.ಮಾಜಿ ಅಧ್ಯಕ್ಷ ದೇವಿಪ್ರಸಾದ್ ಪೂಂಜ, ಸದಸ್ಯರಾದ ಸದಾನಂದ ಶೆಟ್ಟಿ , ಮಾರಪ್ಪ ಕೊಟ್ಟಾರಿ ,ಸುಬ್ರಹ್ಮಣ್ಯ ಭಟ್ , ಕೃಷ್ಣಮೂರ್ತಿ, ಪದ್ಮನಾಭ ಮಯ್ಯ , ಮುತ್ತಪ್ಪ ಪೂಜಾರಿ , ಶಿಲ್ಪಿ ರಾಜೇಂದ್ರ , ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಯಶಂಕರ ಬ್ರಾಸಿತ್ತಾಯ, ಎಂ.ಎಂ.ಕನ್ಸ್ಟ್ರಕ್ಷನ್ ಮಂಗಳೂರು ಇದರ ಮಾಲಕ ಮಹಾಬಲ ಕೊಟ್ಟಾರಿ,ವಾಸು ಗಟ್ಟಿ ಮತ್ತಿತರರು ಉಪಸ್ಥಿತರಿದ್ದರು.
