ಬಂಟ್ವಾಳ : ವೈಯುಕ್ತಿಕ, ಸಾಮಾಜಿಕ, ಜಾಗತಿಕ ಆರೋಗ್ಯದ ದೃಷ್ಠಿಯಿಂದ ಸುರಕ್ಷಿತ ಆಹಾರದ ಸೇವನೆ ಅಗತ್ಯ ಎಂದು ವಿದ್ಯಾಗಿರಿಯ ಬಂಟ್ವಾಳ ರಘುರಾಮ ಮುಕುಂದ ಪ್ರಭು ಸೆಂಟಿನರಿ ಪಬ್ಲಿಕ್ ಸ್ಕೂಲ್‍ನ ಪ್ರಾಂಶುಪಾಲೆ ಶ್ರೀಮತಿ ರಮಾಶಂಕರ್ ಸಿ ಹೇಳಿದರು. ಅವರು ಶಾಲೆಯಲ್ಲಿ ನಡೆದ ‘ವಿಶ್ವ ಆರೋಗ್ಯ ದಿನ’ ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಸಮೂಹ ಗಾಯನ, ಭಾಷಣ ಹಾಗೂ ನಾಟಕಗಳ ಮೂಲಕ ಆಹಾರ ಸಂರಕ್ಷಣೆಯ ಅಗತ್ಯತೆಯನ್ನು ತಿಳಿಸಿದರು. 9ನೇ ತರಗತಿಯ ರೆನಿಟಾ ಮರಿಯಾ ಸ್ವಾಗತಿಸಿ, ನಿಶಾಂತ್ ಅಂಚನ್ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಎಲ್ಲಾ ಶಿಕ್ಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
