ಕಿನ್ನಿಗೋಳಿ: ಮುಲ್ಕಿ ಠಾಣಾ ವ್ಯಾಪ್ತಿಯ ಕಿನ್ನಿಗೋಳಿ ಸಮೀಪದ ಮೂರು ಕಾವೇರಿಯ ಶ್ರೀ ಮಹಮ್ಮಾಯಿ ದೇವಸ್ಥಾನಕ್ಕೆ ನಿನ್ನೆ ತಡ ರಾತ್ರಿ ಕಳ್ಳರು ನುಗ್ಗಿ ಮೂರು ಗಂಟೆ ಮತ್ತು ದೀಪಗಳನ್ನು ದೂಚಿದ್ದಾರೆ, ಕಿನ್ನಿಗೋಳಿ ಮೂಡಬಿದ್ರೆ ಮುಖ್ಯ ರಸ್ತೆಗೆ ತಾಗಿಕೊಂಡಿರುವ ಈ ದೇವಸ್ಥಾನ ಕಂಪೌಡ್ ನಲ್ಲಿ ಕಾಣಿಕೆ ಡಬ್ಬಿ ಇದ್ದು ಅದರ ಬೀಗವನ್ನು ಹೊಡೆದ ಕಳ್ಳರು ಒಳ ಬದಿಯಿಂದ ಇನ್ನೋಂದು ಬೀಗ ಇದ್ದ ಕಾರಣ ಅದನ್ನು ಒಡೆಯುವ ವ್ಯರ್ಥ ಪ್ರಯತ್ನ ನಡೆಸಿದ್ದಾರೆ.


ದೇವಸ್ಥಾನದ ಮುಂಭಾಗದ ಮೂರು ಗಂಟೆಗಳು ಮತ್ತು ಒಂದು ಉರಿಯುತ್ತಿದ್ದ ದೀಪ ಮತ್ತು ಬದಿಯಲ್ಲೇ ಇರುವ ಕಲ್ಲುರ್ಟಿ ಪಂಜುರ್ಲಿ ಮತ್ತು ಚಾಮುಂಡೇಶ್ವರೀ ಗುಡಿಯ ಎದುರಿದ್ದ ದೀಪವನ್ನು ಕದ್ದು ಪರಾರಿಯಾಗಿದ್ದಾರೆ, ಇದು ಸ್ಥಳೀಯರೇ ಕಳ್ಳತನ ನಡೆಸಿರುವ ಸಾದ್ಯತೆ ಇದೆ ಎನ್ನಲಾಗಿದೆ ಮುಲ್ಕಿ ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.


