ಸುದ್ದಿ9 ಕೈಕಂಬ: ಪೊಂಪೈ ಮಾತೆಯ ದೇವಾಲಯಕ್ಕೆ ಆಗಮಿಸಿದ ಶಾಸಕ ಮೊಯಿದಿನ್ ಬಾವರವರು ಎಲ್ಲರಿಗೂ ಈಸ್ಟರ್ ಹಬ್ಬದ ಶುಭಾಶಯ ಕೋರಿದರು.
ಈ ಸಂದರ್ಭದಲ್ಲಿ ಅವರು ಅಲ್ಪಸಂಖ್ಯಾತರಿಗೆ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿ, ತಮ್ಮ ಸಂಪೂರ್ಣ ಸಹಕಾರ ನೀಡುವ ಆಶ್ವಾಸನೆಯನ್ನು ನೀಡಿದರು ಹಾಗೂ ಅಲ್ಪಸಂಖ್ಯಾತರಿಗೆ ಬಿಡುಗಡೆಯಾದ ಚೆಕ್‍ಗಳನ್ನು ಪೊಂಪೈ ಮಾತೆಯ ದೇವಾಲಯದ ಧರ್ಮಗುರುಗಳು ಎಂ.ಗ್ರೆಗರಿ ಸೆರಾವೂರವರಿಗೆ ಹಸ್ಥಂತರಿಸಿದರು.


ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷರು ಹಾಗೂ ತಾಲೂಕು ಪಂಚಾಯತ್ ಸದಸ್ಯರಾದ ಶ್ರೀ ಜೊನ್ಸೆನ್ ಲೋಬೊ ಉಪಸ್ಥಿತರಿದ್ದರು.



