ಸುದ್ದಿ9 ಕೈಕಂಬ: ಯೇಸುಕ್ರಿಸ್ತರ ಪುನರುತ್ಥಾನದ ಹಬ್ಬ ಈಸ್ಟರ್ ಆಚರಣೆಯ ಪ್ರಯುಕ್ತ ಗುರುಪುರ ಕೈಕಂಬದ ಪೊಂಪೈ ಮಾತೆ ದೇವಾಲಯದಲ್ಲಿ ಎ.4 ಶನಿವಾರ ರಾತ್ರಿ ಆಚರಣೆಗೆ ರೇಫಾ ಗ್ರೆಗರಿ ಸೆರಾವೊ, ಸಂತ ಜೊಸೆಪ್ ಸೆಮಿನರಿ ಇದರ ಪ್ರಾಧ್ಯಪಕರಾದ ರಾಜೇಶ್ ರೊಜಾರಿಯಾ ಹಾಗೂ ಅತಿ ವಂದನೀಯ ಗುರು ಅನಿಲ್ ಫೆರ್ನಾಂಡಿಸ್‍ರವರು ಈಸ್ಟರ್ ಮೊಂಬತ್ತಿ ಉರಿಸಿ ಆಚರಣೆಗೆ ಚಾಲನೆ ನೀಡಿದರು.


ಈಸ್ಟರ್ ಪ್ರಯುಕ್ತ ಹಮ್ಮಿಕೊಳ್ಳಲಾದ ಬಲಿಪೂಜೆಯಲ್ಲಿ ಭಕ್ತಿ ಪೂರಕ ಪೂಜಾವಿಧಿಗಳನ್ನು ನೆರವೇರಿಸಲಾಯಿತು. ರೇಫಾ ರಾಜೇಶ್ ರೊಜಾರಿಯಾ ಅವರು ಯೇಸು ಕ್ರಿಸ್ತರು ಮಾನವನ ಪಾಪ ವಿಮೋಚನೆಗಾಗಿ ಶಿಲುಬೆಗೇರಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ. ಅಂತೆಯೇ ಪ್ರತಿಯೊಬ್ಬರು ಪರಸ್ಪರ ಸ್ನೇಹ ಮನೋಭಾವ, ಸಹಕಾರ, ಸೇವೆ, ಇತರರ ಬಗ್ಗೆ ಧನಾತ್ಮಕ ಚಿಂತನೆಯನ್ನು ಮಾಡಿ ಬಾಳಲು ತಮ್ಮ ಪ್ರಸಂಗದಲ್ಲಿ ಕರೆ ನೀಡಿದರು. ಬಲಿ ಪೂಜೆಯ ಕೊನೆಯಲ್ಲಿ ಪೊಂಪೈ ಚೆಂಫಾಲ್ಕೆಂ”ಯ 41ನೇ ಪುಸ್ತಕವನ್ನು ರೇಫಾ ರಾಜೇಶ್ ರೊಜಾರಿಯಾರವರು ಬಿಡುಗಡೆ ಮಾಡಿದರು. ಈ ಕಾರ್ಯಕ್ರಮವನ್ನು ಸಂಪಾದಕರು ಡಾ|ಗೋಡ್ವಿನ್ ಲೋಬೋರವರು ನೆರವೇರಿಸಿದರು. ಅಂತಿಮ ಭಕ್ತಿ ಗೀತೆಯ ಮೂಲಕ ಈಸ್ಟರ್ ಹಬ್ಬದ ಆಚರಣೆ ಮುಕ್ತಾಯಗೊಂಡಿತು.








