ಕೈಕಂಬ:ಶ್ರೀ ಕಾವೇಶ್ವರ ಭಕ್ತ ವೃಂದ ಬಟ್ಟಾಜೆ ಇದರ ದಶಮ ವರ್ಷದ ಸಂಭ್ರಮದ ಧಾರ್ಮಿಕ ಸಭೆಯು ಏ.26ರಂದು ಭಾನುವಾರ ಜರಗಲಿದೆ.
ಬೆಳಿಗ್ಗೆ ಗಂಟೆ 10-00 ಕ್ಕೆ ಸಾರ್ವಜನಿಕ ಸತ್ಯನಾರಾಯಣ ಪೂಜೆ ಮದ್ಯಾಹ್ನ ಗಂಟೆ 12-30ಕ್ಕೆ ಮಹಾಪೂಜೆ, ಪ್ರಸಾದವಿತರಣೆ, ಅನ್ನಸಂತರ್ಪಣೆ. ನಡೆಯಲಿರುವುದು.
download
ರಾತ್ರಿ 8.30ಕ್ಕೆ ಧಾರ್ಮಿಕ ಸಭೆ ನಡೆಯಲಿದ್ದು ಇದರ ಅಧ್ಯಕ್ಷತೆಯನ್ನು ಕಾವೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ರಘು ಎಲ್ ಶೆಟ್ಟಿ ವಹಿಸಲಿದ್ದಾರೆ. ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿವಿವೇಕಚ್ಯತನ್ಯಾನಂದ ಆಶೀರ್ವಚನ ನೀಡಲಿದ್ದಾರೆ. ವಿಶ್ವ ಹಿಂದು ಪರಿಷತ್ ಮಂಗಳೂರು ವಿಭಾಗದ ಕಾರ್ಯಧ್ಯಕ್ಷ ಜಿತೇಂದ್ರ ಕೊಟ್ಟಾರಿ ಧಾರ್ಮಿಕ ಭಾಷಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಭಾರತ್ ಕೋ ಆಪರೇಟಿವ್ ಬ್ಯಾಂಕ್ ಮುಂಬ್ಯೆ ನಿರ್ದೇಶಕ ಮತ್ತು ಬಡಗಬೆಳ್ಳೂರು ಪಂಚಗ್ರಾಮ ಬಿಲ್ಲವ ಸಂಘದ ಅಧ್ಯಕ್ಷ ಗಂಗಾಧರ ಪೂಜಾರಿ ಕೊಪ್ಪಲ, ಕಾವೇಶ್ವರ ಭಕ್ತವೃಂದದ ಗೌರವಧ್ಯಕ್ಷ ನಾಶಿಕ್ ಉದ್ಯಮಿ ಕೃಷ್ಣಪ್ಪ ಪೂಜಾರಿ ಕುಕ್ಕಾಜೆ ಮತ್ತು ಬಿಜೆಪಿ ಬಂಟ್ವಾಳ ಮಂಡಲ ಸಮಿತಿಯ ಪ್ರ. ಕಾರ್ಯದರ್ಶಿ ದೇವಪ್ಪ ಪೂಜಾರಿ ಭಾಗವಹಿಸಲಿದ್ದಾರೆ. ಸಭಾ ಕಾಯಱಕ್ನಂರಮದ ನಂತರ ಸುಂಕದಕಟ್ಟೆ ಅಂಬಿಕಾ ಅನ್ನಪೂರ್ಣೇಶ್ವರೀ ಯಕ್ಷಗಾನ ಮಂಡಳಿ ಯವರಿಂದ “ಪಾತಾಳಬೈರವಿ” ಎಂಬ ತುಳು ಯಕ್ಷಗಾನ ಬಯಲಾಟ ನಡೆಯಲಿದೆ. ಎಂದು ಶ್ರೀ ಕಾವೇಶ್ವರ ಭಕ್ತವೃಂದದ ಪ್ರಕಟನೆ ತಿಳಿಸಿದೆ .

By suddi9

Leave a Reply

Your email address will not be published. Required fields are marked *