ಬಂಟ್ವಾಳ: ಬಂಟ್ವಾಳದಿಂದ ಗೂಡಿನಬಳಿ ಮೂಲಕ ಪಾಣೆಮಂಗಳೂರು ಪೇಟೆಯನ್ನು ತಲುಪುವ ಪ್ರಮುಖ ಅಡ್ಡರಸ್ತೆಯಾದ ಕಂಚಿಕಾರ ಪೇಟೆ ರಸ್ತೆಯಲ್ಲಿ ಮುರಿದು ಸಂಚಾರಕ್ಕೆ ಅಡ್ಡಿಯಾಗುತ್ತಿದ್ದ ಕಿರು ಸೇತುವೆಗೆ ಕಾಯಕಲ್ಪದ ಜೀವ ತುಂಬಿದೆ. ಅಮೂಲಕ ಇಲ್ಲಿನ ಜನರ ಹಲವಾರು ವರ್ಷಗಳ ಬೇಡಿಕೆಗೆ ಕೊನೆಗೂ ಮನ್ನಣೆ ದೊರೆತಂತಾಗಿದೆ. ಬಂಟ್ವಾಳ ಪುಸಭಾ ವ್ಯಾಪ್ತಿಯ ಕಂಚಿಕಾರ ಪೇಟೆಯಲ್ಲಿ ಹಲವಾರು ಮನೆಗಳಿದ್ದು, ಜೊತೆಗೆ ದೇವಸ್ಥಾನ ಕೂಡ ಇದೆ. ತಮ್ಮ ದೈನಂದಿನ ಚಟುವಟಿಕೆಗಳಿಗೆ ಇಲ್ಲಿನ ಜನರು ಈ ರಸ್ತೆಯನ್ನೇ ಬಳಸುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಸೇತುವೆಯ ತಡೆಬೇಲಿಗಳನ್ನು ಕಳೆದುಕೊಂಡು ನಾದುರಸ್ತಿ ಸ್ಥಿತಿಗೆ ತಲುಪಿದ್ದ, ಈ ಕಾರಣಕ್ಕಾಗಿ ಹಲವು ಸಮಯಗಳಿಂದ ವಾಹನ ಸಂಚಾರವೇ ವೇ ಸ್ಥಗಿತಗೊಂಡಿತ್ತು.
ಬಂಟ್ವಾಳದ ಕಂಚಿಕಾರ ಪೇಟೆಯ ಕಿರು ಸೇತುವೆಗೆ ಪುನರ್ ನಿಮರ್ಾಣ ಭಾಗ್ಯ ಒದಗಿ ಬಂದಿದೆ. ಲೋಕೋಪಯೋಗಿ ಇಲಾಖೆಯ 5054- ಅಪೆಂಡಿಕ್ಸ್ ಇ ಯೋಜನೆಯಡಿ ಸುಮಾರು 70 ಲಕ್ಷ ರುಪಾಯಿ ವೆಚ್ಚದಲ್ಲಿ ಸೆತುವೆ ಪುನರ್ ನಿಮರ್ಾಣ ಹಾಗೂ 0.90 ಕಿ.ಮೀ ಉದ್ದ ರಸ್ತೆ ಅಭಿವೃದ್ದಿ ಕಾರ್ಯ ಪ್ರಾರಂಭಗೊಂಡಿದೆ.
DSC_4110

 

DSC_4108

DSC_4109
ನೇತ್ರಾವತಿ ನದಿ ತಟದಲ್ಲೇ ಇದ್ದ ಈ ಸೇತುವೆ ಬಹಳ ಹಳೆಯ ಕಾಲದ್ದು. ಬಂಟ್ವಾಳ ಪೇಟೆ ಹಾಗೂ ಪಾಣೆಮಮಗಳೂರು ಪೇಟೆಗೆ ಪ್ರಮುಖ ಸಂಪರ್ಕ ಕೊಂಡಿಯಾಗಿತ್ತು. ಕ್ರಮೇಣ ಅಪಾಯಕಾರಿ ಸ್ಥಿತಿಗೆ ತಲುಪಿದ್ದ ಈ ಸೇತುವೆಯ ಇನ್ನೇನು ಮರಿದು ಬೀಳುತ್ತದೆ ಎನ್ನುವಷ್ಟರಲ್ಲೇ ಸೇತುವೆಯ ಮೇಲಿಂದ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಆ ಬಳಿಕ ಸೇತುವೆಯ ದುರಸ್ತಿ ಅಥವಾ ಪುನರ್ ನಿಮರ್ಾಣ ಕಾಮಾಗಾರಿಯ ಬಗ್ಗೆ ಯಾರೂ ಚಕಾರವೆತ್ತದ ಪರಿಣಾಮ ಸೇತುವೆ ದುರಸ್ತಿ ನೆನಗುದಿಗೆ ಬಿದ್ದಿತ್ತು. ಇದರಿಂದ ಪಾಣೆಮಂಗಳೂರು, ಗೂಡಿನ ಬಳಿಯಿಂದ ಬಂಟ್ವಾಳ ಪೇಟೆಗೆ ಬರುವ ಹಾಗೂ ಬಂಟ್ವಾಳ ಕಡೆಯಿಂದ ಪಾಣೆಮಮಗಳೂರು ಪೇಟೆಗೆ ಬರುವ ಜನರು ಸುತ್ತು ಬಳಸಿ ಬರುವ ಅನಿವಾರ್ಯತೆ ಒದಗಿದೆ. ಇದೀಗ ಸೇತುವೆ ಪುನರ್ ನಿಮರ್ಾಣಕ್ಕೆ ಸಚಿವ ರಮನಾಥ ರೈ ವಿಶೇಷ ಮುತುವಜರ್ಿ ವಹಿಸಿದ್ದು ಸೇತುವೆ ನಿಮರ್ಾಣಗೊಂಡ ಬಳಿಕ ಈ ಭಾಗದ ಜನತೆಯ ಬಹು ದಿನಗಳ ಬೇಡಿಕೆಯೊಂದು ಈಡೇರಿದಂತಾಗುತ್ತದೆ.

By suddi9

Leave a Reply

Your email address will not be published. Required fields are marked *