ಮೂಡುಬಿದರೆ: ಇಲ್ಲಿನ ಆಳ್ವಾಸ್ ಕಾಲೇಜ್‍ನ ಹಾಸ್ಟೆಲ್‍ನಿಂದ ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಗುರುವಾರ ಮೂಡುಬಿದರೆ ಪೊಲೀಸ್ ಠಾಣೆಗೆ ಹಾಜರಾಗಿದ್ದಾಳೆ.
ಅಳ್ವಾಸ್ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ರಶ್ಮಿ ನಾಯಕ್ ಎಂಬಾಕೆ ನಾಪತ್ತೆಯಾಗಿ ಇದೀಗ ಪತ್ತೆಯಾಗಿರುವ ವಿದ್ಯಾರ್ಥಿನಿ. ಮೂಲವೊಂದರ ಪ್ರಕಾರ ಈಕೆಗೆ ಸಾಗರದ ಯುವಕನೊಬ್ಬನ ಜತೆ ಸ್ನೇಹವಿತ್ತು ಎನ್ನಲಾಗಿದೆ. ನನಗೆ ಶಿಕ್ಷಣ ಮುಂದುವರಿಸಲು ಇಷ್ಟವಿಲ್ಲವೆಂದು ಆಕೆ ಹಾಸ್ಟೆಲ್‍ನಲ್ಲಿ ಚೀಟಿಯೊಂದನ್ನು ಬರೆದಿಟ್ಟು ಹೋಗಿದ್ದಳೆನ್ನಲಾಗಿದೆ ಈ ಬಗ್ಗೆ ಪೊಲೀಸರಿಗೂ ಹೆಳಿಕೆಯನ್ನು ನೀಡಿದ್ದಲೆನ್ನಲಾಗಿದೆ.
ಈಕೆ ಸಾಗರ ತಾಲ್ಲೂಕಿನ ಕೊಪ್ಪಲದ ಮಂಜುನಾಥ್ ಅವರ ಪುತ್ರಿ. ಕಾಲೇಜ್ ಹಾಸ್ಟೆಲ್‍ನಲ್ಲಿ ಉಳಿದುಕೊಂಡಿದ್ದ ಈಕೆ ಮಾರ್ಚ್ 22ರಂದು ಬೆಳಿಗ್ಗೆ 11 ಗಂಟೆಗೆ ಇತರ ವಿದ್ಯಾರ್ಥಿಗಳ ಜತೆ ಹೊರ ಹೋದವಳು ನಂತರ ನಾಪತ್ತೆಯಾಗಿದ್ದಳು.

By suddi9

Leave a Reply

Your email address will not be published. Required fields are marked *