ಬಂಟ್ವಾಳ: ಪ್ರಕೃತಿ ಮನುಷ್ಯನ ಪ್ರಗತಿಗೆ ಪೂರಕವಾಗಿದೆ. ನಾವು ಪ್ರಕೃತಿಯನ್ನು ಶೋಷಣೆ ಮಾಡದೆ ಅದನ್ನು ಪೋಷಣೆ ಮಾಡುವುದರ ಮೂಲಕ ಪ್ರಕೃತಿಯ ಅರಾಧಕರು ನಾವಾಗಬೇಕು. ಸದ್ಗುಣಗಳನ್ನು ಬೆಳೆಸುವ ಈ ಶಿಬಿರ ಯಶಸ್ವಿಯಾಗಲೆಂದು ಸಂವರ್ಧನ ಮತ್ತು ಹೊಂಬೆಳಕು ಬೇಸಿಗೆ ಶಿಬಿರವನ್ನು ಉದ್ಘಾಟಿಸಿ ಶ್ರೀ ಉಪೇಂದ್ರ ಬಲ್ಯಾಯ ಮಾತನಾಡಿದರು.

ಶಿಬಿರವು ವಿದ್ಯಾರ್ಥಿಗಳ ವ್ಯಕ್ತಿತ್ವಕ್ಕೆ ಪೂರಕವಾಗಿದ್ದು, ಶಿಬಿರದಿಂದ ವಿದ್ಯಾರ್ಥಿಗಳು ಪೂರ್ಣ ಪ್ರಮಾಣದ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಶ್ರೀರಾಮ ವಿದ್ಯಾಕೆಂದ್ರದ ಸಂಚಾಲಕರಾದ ಡಾ|ಪ್ರಭಾಕರ ಭಟ್ ಕಲ್ಲಡ್ಕ ಶುಭ ಹಾರೈಸಿದರು.
ವೇದಿಕೆಯಲ್ಲಿ ಶ್ರೀ ಸದಾಶಿವ ರೈ ಸೂರಂಬೈಲು, ಲೋಕೇಶ್ ಕೆ., ಮೊಹಿದ್ದೀನ್, ರಾಕೇಶ್ ದಂಪತಿಗಳು, ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ವಸಂತ ಮಾಧವ ಶ್ರೀಮಾನ್ ಉಪಸ್ಥಿತರಿದ್ದರು.
ವಿದ್ಯಾರ್ಥಿ ದೀಕ್ಷಾ ಕಾರ್ಯಕ್ರಮ ನಿರೂಪಿಸಿ, ಲೋಹಿತ್ ಸ್ವಾಗತಿಸಿ, ಗೌತಮ್ ವಂದಿಸಿದರು.
