ಬಂಟ್ವಾಳ: ಬಹು ದೀರ್ಘ ಸಮಯದಿಂದ ಸಜೀಪಮೂಡ ಗ್ರಾಮದದಲ್ಲಿ ಸ್ಮಶಾನ ನಿರ್ಮಾಣದ ಉದ್ದೇಶವು ಪ್ರಸ್ತುತ ಈಡೇರಿದ್ದು, ದ. ಕ. ಜಿಲ್ಲಾ„ಕಾರಿಗಳು ಸರ್ವೆ ನಂಬ್ರ 246/1ಎ1ರಲ್ಲಿ 0. 45 ಎಕ್ರೆ ಜಮೀನು ಮಂಜೂರಾತಿ ನೀಡಿದ್ದಾರೆ. ಜಿಲ್ಲೆಯ ಇಡೀ ಕಂದಾಯ ಇಲಾಖೆಗೆ ಕೃತಜ್ಞತೆ ಸಲ್ಲಿಸುವುದಾಗಿ ಸಜೀಪಮೂಡ ಹಿಂದೂ ರುದ್ರಭೂಮಿ ಸಮಿತಿ ಅಧ್ಯಕ್ಷ ಬಿ. ಸದಾನಂದ ಪೂಂಜ ಹೇಳಿದ್ದಾರೆ.
ಅವರು ಮಾ. 26ರಂದು ಬಂಟ್ವಾಳ ತಾಲೂಕು ಕಛೇರಿಗೆ ಆಗಮಿಸಿ ತಹಶೀಲ್ದಾರ್ ಅವರಿಗೆ ಮತ್ತು ಬಂಟ್ವಾಳ ಪೊಲೀಸ್ ವಿಭಾಗ ಎಎಸ್‍ಪಿ ರಾಹುಲ್ ಅವರಿಗೆ ಮನವಿ ಸಲ್ಲಿಸಿ ಕೃತಜ್ಞತೆ ಸಲ್ಲಿಸಿದರು.
2603bteph5

2603bteph5A

2603bteph5B
ಸಜೀಪಮೂಡ ಗ್ರಾಮದ ಬೊಳ್ಳಾಯಿ ಪಟ್ಟುಗುಡ್ಡೆಯಲ್ಲಿ ಹತ್ತು ವರ್ಷಗಳ ಹಿಂದೆ ಅಂದಿನ ಜಿಲ್ಲಾ„ಕಾರಿ ಜಮೀನು ಮಂಜೂರಾತಿ ಮಾಡಿದ್ದಾರೆ. ಅಲ್ಲಿ ನೆಲ ಸಮತಟ್ಟು ಮಾಡುವ ಕೆಲಸ ಆಗಿದೆ. ಇನ್ನಷ್ಟು ಕೆಲಸಗಳನ್ನು ಯಾವುದೇ ತಪ್ಪಿಲ್ಲದೆ ನಡೆಸುವುದಾಗಿ ಭರವಸೆ ನೀಡಿದರು.
ಪ್ರಸ್ತುತ ಸ್ಮಶಾನ ನಿರ್ಮಾಣ ಪರಿಸರದಲ್ಲಿ ಯಾವುದೇ ಮನೆಗಳು ಇಲ್ಲ. ಎಲ್ಲಾ ಸಮಾಜದ ಒಪ್ಪಿಗೆಯಿಂದ ಇಲ್ಲಿ ರುದ್ರಭೂಮಿ ನಿರ್ಮಾಣ ಆಗುತ್ತಿದೆ. ಜಿಲ್ಲಾ„ಕಾರಿಗಳು, ಸಹಾಯಕ ಕಮಿಷನರ್ ಅವರ ಪರಿಶೀಲನೆ ಬಳಿಕ ರುದ್ರಭೂಮಿ ನಿರ್ಮಾಣಕ್ಕೆ ಒಪ್ಪಿಗೆ ನೀಡಿದ್ದಾರೆ ಎಂದು ಅಲ್ಲಿ ಸೇರಿದ್ದ ಸಭೆ ಉದ್ದೇಶಿಸಿ ನುಡಿದರು.
ಗ್ರಾ.ಪಂ. ಅಧ್ಯಕ್ಷೆ ಸುಂದರಿ, ಉಪಾಧ್ಯಕ್ಷೆ ಗೀತಾ, ಮಾಜಿ ಅಧ್ಯಕ್ಷ ದೇವಿಪ್ರಸಾದ್ ಪೂಂಜ,ಸದಸ್ಯರಾದ ಅಬ್ದುಲ್ ಕರೀಂ, ಕೆ.ಎಚ್. ಹೈದರ್,ಜಲೀಲ್ ಸಂಜೀವಿನಿ, ಯೋಗೀಶ ಬೆಳ್ಚಡ, ಬಿ.ಎ. ಉಮರಬ್ಬ, ಪ್ರಮುಖರಾದ ಸಾರ್ತಾವು ಸುರೇಶ್, ಶಿವಪ್ರಸಾದ್ ಶೆಟ್ಟಿ, ಸರ್ವಾನಿ ಶೆಟ್ಟಿ, ಶೋಭಾ ಶೆಟ್ಟಿ, ವಿಲ್ಸನ್ ಪಿರೇರಾ, ಉದಯ ಕಾಂಜಿಲ ಸಹಿತ ಇತರ ಅನೇಕ ಊರಿನ ಗಣ್ಯರು ಮನವಿ ಸಲ್ಲಿಕೆ ಸಂದರ್ಭ ಉಪಸ್ಥಿತರಿದ್ದರು.
( ಜಿ.ಪಂ. ಮಾಜಿ ಅಧ್ಯಕ್ಷ ಬಿ. ಸದಾನಂದ ಪೂಂಜ ಬಂಟ್ವಾಳ ಉಪ ತಹಶೀಲ್ದಾರ್ ಪರಮೇಶ್ವರ ನಾಯ್ಕ್ ಅವರಿಗೆ ಮನವಿ ಸಲ್ಲಿಸಿದರು)

By Suddi9

Leave a Reply

Your email address will not be published. Required fields are marked *