ಪೊಳಲಿ:ಇತಿಹಾಶ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರೀ ಅಮ್ಮನವರ ಜಾತ್ರೋತ್ಸವವು “ಪೊಳಲಿಜಾತ್ರೆ” ಎಂದೇ ಪ್ರತೀತಿ ಇಲ್ಲಿಯ ಉತ್ಸವಾದಿಗಳು ನಡೆಯುವುದು ಸುಬ್ರಹ್ಮಣ್ಯ ಸ್ವಾಮಿಗೆ ಇದು ಇಲ್ಲಿಯ ವಿಶೇಷತೆ
ಮೀನ ಮಾಸದ ಸಂಕ್ರಮಣದಂದು ಮಾ.14ರಂದು ದ್ವಜರೋಹನಗೊಳ್ಳುವುದು ಇಲ್ಲಿಯ ನಿಯಮ.ಉಳಿಪಾಡಿಗುತ್ತಿನಂದ ರಾತ್ರಿ ಭಂಡಾರ ಾಗಮಿಸಿದ ನಂತರ ನಂದ್ಯ ಭಗವತಿ ಕ್ಷೇತ್ರದಿಂದ ಭದ್ರಕಾಳಿ ಮೂರ್ತಿ, ಹಾಗೂ ಅರಸು ದ್ಯೆವದ ಮೊಗ ಮೂರ್ತಿಯೂ ಮೆರವಣಿಗೆಯಲ್ಲಿ ಆಗಮಿಸಿದಗ ದೇವಳದ ಆಡಳಿತ ಮಂಡಳಿಯವರು ಎದುರುಗೊಂಡು ಅದನ್ನು ದೇವಳದ ಗೋಪುರದಲ್ಲಿ ಇಡುತ್ತಾರೆ.ದ್ವಜರೋಹಣದಬಳಿಕ ಬಲಿ ಉತ್ಸವಾದಿಗಳು ನೆರೆದು. 15ರಂದು ಬೆಳಗಿನ ಜಾವ ಕಂಚಿಲು ಸೇವೆ ನಡೆದ ಬಳಿಕ ಸಾವಿರ ಸೀಮೆಯ ಭಕ್ತಾಧಿಗಳು, ಗುತ್ತಿನವರು, ಅರ್ಚಕರು ಗೋಪುರದಲ್ಲಿ ಎಷ್ಟು ದಿನದ ಜಾತ್ರೆ ಎಂದು ತಿಳಿಯಲು ಕಾತುರದಲ್ಲಿರುತ್ತಾರೆ. *ಕುದಿ ಲೆಪ್ಪುನು * ಪಂಬದ ವೇಷ ಹಾಕಿ ಗೋಪುರದಲ್ಲಿ ಮೂರು ಸುತ್ತು ಬಂದು ದಿನವನ್ನು ಗೊತ್ತು ಮಾಡುತ್ತಾನೆ ಈ ಬಾರಿ 29 ದಿನದ ಜಾತ್ರೆಯು ಬಂದಿದ್ದು ಎಪ್ರಿಲ್ 12ರವರೇಗೆ ಜಾತ್ರೆಯ ಉತ್ಸವಾದಿಗಳು ನಡೆಯುತ್ತದೆ.

ದ್ವಜಾರೋಹಣಗೊಂಡು ಪ್ರತಿ ಐದು ದಿವಸಕ್ಕೊಮ್ಮೆ ದಂಡಮಾಲೋತ್ಸವ ನಡೆಯುತ್ತದೆ
“ಸುಬ್ರ್ರಹ್ಮಣ್ಯಸ್ವಾಮಿಗೆ ಕೇಪುಳ ಹೂವಿನ ದಂಡೆಯ ಅಲಂಕಾರ’
ಪಾಟಾಳಿ ವರ್ಗದವರು ದಂಡಮಾಲೆಯ ಎರಡು ದಿನದ ಮುಂಚೆ ಗುಡ್ಡದ ಕೇಪುಳ ಹೂವನ್ನು ಉಡುಕಿ ಒಟ್ಟು ಸೇರಿಸುತ್ತಾರೆ ಸುಮಾರು ಮೂರು ಬುಟ್ಟಿನಷ್ಟು ಕೇಪುಳ ಹೂವನ್ನು ತುಂಬಿಸಿ ಅದನ್ನು ಗೊನೆಹಾಕಿದ ಕದಳಿಬಾಳೆ ಗಿಡದ ಹಗ್ಗದಲ್ಲಿ ಕೇಪುಳ ಹೂವಿನ ದಂಡೆಯನ್ನು ನೆಯುತ್ತಾರೆ.ಪ್ರತಿ ಐದು ದಿವಸಕ್ಕೋಮ್ಮೆ ಕೇಪುಳ ಹೂವಿನ ದಂಡೆಯನ್ನು ಬದಲಾಯಿಸುತ್ತಾರೆ ಎ.3ರಂದು 20ನೇದಂಡಮಾಲೆ. ಇಪ್ಪತ್ತು ದಿನದ ಜಾತ್ರೆಯು ಜರಗುತ್ತದೆ.ಕೇಪುಳ ಹೂವಿನ ದಂಡೆಯನ್ನು ಸುಬ್ರಹ್ಮಣ್ಯಸ್ವಾಮಿಗೆ ಅಲಂಕರಿಸುತ್ತಾರೆ.
“ಸುಬ್ರಹ್ಮಣ್ಯಸ್ವಾಮಿ ದೇವರ ಬಲಿಯು ಸಂಜೆ 6.30ಕ್ಕೆ ಬಲಿ ಹೊರಡುವುದು”
ಬಲಿಹೊರಡುವ ಮುಂಚೆ ಪದಾರ್ಥಿಗಳು ತಂತ್ರಿಗಳಿಂದ ಅಪ್ಪಣೆ ಪಡೆದು ದೀವಿಟಿಗೆ ಹಿಡಿಯುವವರಿಗೆ ಹೊರಿಸಲು ತಿಳಿಸುವರು.ಪದಾಥರ್ಿಗಳು ಪಾಣೆ ಬಾರಿಸಿದ ನಂತರ ದೇವರ ಗರ್ಭಗುಡಿಯಲ್ಲಿ ಸುಭ್ರಹ್ಮಣ್ಯ ಸ್ವಾಮಿ ದೇವರನ್ನು ಪಾಣಿಪೀಠದಲ್ಲಿ ಕುಳ್ಳಿರಿಸಿ ತಂತ್ರಿಗಳು ತಂತ್ರ ತೂಕುವರು.
ಮೂರು ದೀವಿಟಿಗೆ
“ಒಂದು ದೀವಿಟಿಗೆ ಸುಬ್ರಹ್ಮಣ್ಯ ಸ್ವಾಮಿ ದೇವರಿಗೆ ಇನ್ನೊಂದು ದೀವಿಟಿಗೆ ತಂತ್ರಿಗಳಿಗೆ ಮೂರನೆ ದೀವಿಟಿಗೆ ಗುತ್ತಿನವರಿಗೆ.
ದೇವರಬಲಿ ಹೊರಡುವುದು- ವಾದ್ಯ, ವಾಲಗದೊಂದಿಗೆ ದೇವಳದ ಒಳಾಂಗಣದಲ್ಲಿ ಎರಡು ಸುತ್ತುಬಲಿ ಆಗಿ ದೇವಳದ ಹೊರಾಂಗಣದ ದ್ವಜಸ್ಥಂಭದ ಬುಡದಲ್ಲಿ *ಪಟಾವು* ಚೆಂಡೆ ಬಾರಿಸಿ ದೀವಿಟಿಗೆ ಹೊರಾಂಗಣಕ್ಕೆ ಬರುವುದು ಆಮೇಲೆ ಪಟಾವು ಸುತ್ತು ಎರಡನೆ ಸುತ್ತಿನ ದೊಡ್ಡ ದ್ವಜ ಸ್ಥಂಭದ ಬುಡದ ದೊಡ್ಡ ಕಲ್ಲಿನ ಹತ್ತಿರ ತಂತ್ರಿಗಳು ತಂತ್ರ ತೂಕುವರು ಮೂರನೆ ದೀವಿಟಿಗೆಯನ್ನು ಕಲ್ಲಪೂಜೆಯ ಸಮಯದಲ್ಲಿ ಗುತ್ತಿನವರಿಗೆ ಹಿಡಿಯುತ್ತಾರೆ ನಾಲ್ಕನೆ ಸುತ್ತಿನಲ್ಲಿ *ಕ್ಷೇತ್ರಪಾಲ*ಕಲ್ಲಪೂಜೆಯನ್ನು ಮಾಡಿ ತಂತ್ರಿಗಳು ಒಳಗೆ ಹೋಗುವರು.
ಮಳಲಿ ಕುಲಾಲ ಭಾಂದವರು ಸುಮಾರು 20ಮಂದಿ ದೀವಿಟಿಗೆಯೊಂದಿಗೆ ದೇವರ ಬಲಿ ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ.
ಇಲ್ಲಿಯ ಒಂದೊಂದು ಸುತ್ತು ಬಲಿಗೆ ಹೆಸರಿರುತ್ತದೆ 1ಉಡಕೆಸುತ್ತು 2ತಿಮಿಲೆಸುತ್ತು3ಇರಾನಸುತ್ತು,3ಚೆಂಡೆಸುತ್ತು ನಗಾರಿ ಸುತ್ತುಆದ ನಂತರ ಎರಡು ಸುತ್ತು ಪಂಚ ವಾದ್ಯ ಗಳೊಂದಿಗೆ ಒಂದು ಸುತ್ತು ದರ್ಶನ ಸುತ್ತುಇದೆ. ಸರ್ವ ವಾದ್ಯಗಳೊಂದಿಗೆ ಸುಬ್ರಹ್ಮಣ್ಯ ಸ್ವಾಮಿಯ ಬಲಿ ನಡೆಯುತ್ತದೆ. ನಂತರ ವಸಂತ ಮಂಟಪದಲ್ಲಿ ದೇವರನ್ನು ಬೆಳ್ಳಿಯ ಉಜ್ಜಾಲಿನಲ್ಲಿ ಕುಳ್ಳಿರಿಸಿ ಮಂತ್ರಪಟಿಸಿ ಆಮೇಲೆ ಮೂರು ಸುತ್ತುಬಲಿ ಆಗಿ ಒಳಾಂಗಣದಲ್ಲಿ ಒಂದು ಸುತ್ತುಬಲಿ ಆದ ಮೇಲೆಗರ್ಭಗುಡಿಗೆ ಸುಭ್ರಹ್ಮಣ್ಯ ದೇವರನ್ನು ಕುಳ್ಳಿರಿಸಿ ತಂತ್ರಿಗಳು ಪೂಜೆ ನೆರವೇರಿಸಿದ ನಂತರ.ಹೊರಾಂಗಣದ ಗರ್ಭಗುಡಿಯ ದುಗರ್ಾಪರಮೇಶ್ವರೀ ದೇವಿಯ ಪೂಜೆಯ ನಂತರ
ರಾಜರಾಜೇಶ್ಬವರೀ ಅಮ್ಮನವರಿಗೆ ಮಹಾಪೂಜೆ ನೆರವೇರುವುದು.ನಂತರ ಚಿಕ್ಕ ಮೂರ್ತಿಯ ನಿತ್ಯ ಬಲಿಯು ಒಳಾಂಗಣದಲ್ಲಿ ಎರಡು ಸುತ್ತು ಹೊರಾಂಗಣದಲ್ಲಿ ಎರಡು ಸುತ್ತುಬಲಿ ನಡೆಯುತ್ತದೆ.







