ಬಂಟ್ವಾಳ: ಬಹುಪಯೋಗಿಯಾದ, ತಾಲೂಕಿನ ಜನತೆಗೆ ಆರೋಗ್ಯ ಸೇವೆ ನೀಡಬೇಕಾದ ಬಂಟ್ವಾಳ ಸರಕಾರಿ ಅಸ್ಪತ್ರೆಯ ಸ್ಥಿತಿಯೇ ತೀರಾ ಅನಾರೋಗ್ಯಕರವಾಗಿದೆ. ಯಾವುದೇ ಮೂಲಭೂತ ಸೌಲಭ್ಯಗಳಿಲ್ಲದೆ ಜನರ ಪಾಲಿಗೆ ನರಕಯಾತನೆಯಾಗಿದ್ದ ಈ ಅಸ್ಪತೆಗೆ 8ವರ್ಷಗಳ ಹಿಂದೆ ನೂರು ಹಾಸಿಗೆಗಳ ಸುಸಜ್ಜಿತ ಕಟ್ಟಡ ಮಂಜೂರಾತಿಗೊಂಡಿದ್ದರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿವರ್ಗದ ನಿರ್ಲಕ್ಷ್ಯದೋರಣೆಯಿಂದ ಅದಿನ್ನೂ ಪೂರ್ಣಗೊಳ್ಳದೆ ಆಮೆಗತಿಯಲ್ಲಿ ಸಾಗುತ್ತಿದೆ. ಜನತೆ ಆರೋಗ್ಯ ಸೇವೆಗಾಗಿ ಪರದಾಡುತ್ತಿದ್ದರೂ, ಅಸ್ಪತ್ರೆಯ ಕಾರ್ಯವೈಖರಿ ವಿರುದ್ಧ ಮೇಲಿಂದ ಮೇಲೆ ಸಾರ್ವಜನಿಕ ವಲಯದಲ್ಲಿ ಆಕ್ರೋಶಗಳು ಕೇಳಿ ಬರುತ್ತಿದ್ದರೂ ಇಲ್ಲಿನ ಜನಪ್ರತಿನಿಧಿಗಳು ಹಾಗೂ ಅಧಿಕಾರಿವೃಂದದ ನಿದ್ದೆಯಿನ್ನೂ ಬಿಟ್ಟಿಲ್ಲ. ತಾಳ್ಮೆಗೆಟ್ಟ ಜನರು ಪ್ರತಿಭಟನೆಯ ಹಾದಿ ಹಿಡಿದರು. ಆರೋಗ್ಯ ಸಚಿವರ ನೆಲದಲ್ಲೇ ಆರೋಗ್ಯ ಸೇವೆಗಾಗಿ ಜನರ ಪರದಾಟ, ಹೋರಾಟ.
ಗುರುವಾರ ಬಿಜೆಪಿ ನಾಯಕ ಎಂ.ತುಂಗಪ್ಪ ಬಂಗೇರ ನೇತೃತ್ವದಲ್ಲಿ ಅಪಾರ ಸಂಖ್ಯೆಯಲ್ಲಿ ಜನರು ಬಂಟ್ವಾಳ ಸರಕಾರಿ ಅಸ್ಪತ್ರೆ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದರು. ಸರಕಾರ ಹಾಗೂ ಅಧಿಕಾರಿಗಳ ವಿರುದ್ಧ ದಿಕ್ಕಾರ ಕೂಗಿದರು. ಕಾಮಗಾರಿ ಶೀರ್ಘಪೂರ್ಣಗೊಳಿಸಿ ಜನತೆಗೆ ಸೂಕ್ತ ಸೇವೆ ನೀಡುವಂತೆ ಆಗ್ರಹಿಸಿದರು
4 (1)

3 (1)

1 (2) 2 (1)

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಜಿಲ್ಲಾ ಪಂಚಾಯತು ಮಾಜಿ ಉಪಾಧ್ಯಕ್ಷ ಎಂ.ತುಂಗಪ್ಪ ಬಂಗೇರಾ ಮಾತನಾಡಿ ಇಲ್ಲಿನ ಸಕರ್ಾರಿ ಆಸ್ಪತ್ರೆಯನ್ನು 30 ಹಾಸಿಗೆಯಿಂದ 100 ಹಾಸಿಗೆಯ ಕಟ್ಟಡಕ್ಕೆ ಮೇಲ್ದಜರ್ೆಗೇರಿಸುವ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿದ್ದು, 8ವರ್ಷವಾದರೂ ಕಾಮಗಾರಿ ಪೂರ್ಣಗೊಂಡಿಲ್ಲ, ಸಕರ್ಾರ ಹಾಗೂ ಆರೋಗ್ಯ ಇಲಾಖೆಯ ನಿರ್ಲಕ್ಷ್ಯವೇ ಇದಕ್ಕೆ ಕಾರಣವಾಗಿದ್ದು. ಮುಂದಿನ ಮೂರು ತಿಂಗಳ ಒಳಗಾಗಿ ಆಸ್ಪತ್ರೆ ಕಾಮಗಾರಿ ಪೂರ್ಣಗೊಳ್ಳದೇ ಇದ್ದಲ್ಲಿ ಜಿಲ್ಲಾ ಉಸ್ತುವಾರಿ ಹಾಗೂ ಆರೋಗ್ಯ ಸಚಿವರಿಗೆ ಮುತ್ತಿಗೆ ಹಾಕಿ ಕಪ್ಪುಬಾವುಟ ಪ್ರದಶರ್ಿಸಿ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ರಾಜ್ಯ ಬಿಜೆಪಿ ಉಪಾಧ್ಯಕ್ಷೆ ಸುಲೋಚನಾ ಜಿ.ಕೆ.ಭಟ್ ಮಾತನಾಡಿ, ಸಕರ್ಾರಿ ಆಸ್ಪತ್ರೆಗಗಳಿಗೆ ಬೇಟಿ ನೀಡಿ, ಪತ್ರಿಕೆಯಲ್ಲಿ ಪ್ರಚಾರ ಗಿಟ್ಟಿಸುವ ಆರೋಗ್ಯ ಸಚಿವರಿಗೆ ಬಂಟ್ವಾಳ ಆಸ್ಪತ್ರೆಯ ದುಃಸ್ಥಿತಿ ಕಾಣುವುದಿಲ್ಲವೇ..?, ಪ್ರತಿಭಟನೆ ನಡೆಸದೇ ಇದ್ದರೆ ಉಸ್ತುವಾರಿ ಸಚಿವರಿಗೆ ಎಚ್ಚರಿಕೆಯಾಗುವುದಿಲ್ಲವೇ ಎಂದು ವ್ಯಂಗ್ಯವಾಡಿದರು. ಎಲ್ಲಾ ಭಾಗ್ಯಗಳ ಜೊತೆಗೆ ಪ್ರಾಮಾಣಿಕ ಅಧಿಕಾರಿಗಳಿಗೆ ನೇಣಿನ ಭಾಗ್ಯ ನೀಡುತ್ತಿರುವ ಸಕರ್ಾರದ ಜನವಿರೋಧಿ ನೀತಿಗೆ ಬಂಟ್ವಾಳ ಆಸ್ಪತ್ರೆ ಕಾಮಗಾರಿ ಉತ್ತಮ ನಿದರ್ಶನ ಎಂದವರು ಟೀಕಿಸಿದರು.
ಬಂಟ್ವಾಳ ಕ್ಷೇತ್ರ ಬಿಜೆಪಿ ಅಧ್ಯಕ್ಷ ಜಿ.ಆನಂದ ರು ಮಾತನಾಡಿ, ಪ್ರಸ್ತುತ ಬಂಟ್ವಾಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಸರಿಯಾದ ವ್ಯವಸ್ಥೆ ಇಲ್ಲ, ಕುಡಿಯಲು ನೀರಿಲ್ಲ, ಮೃತದೇಹದ ಮರಣೋತ್ತರ ಪರೀಕ್ಷೆಗೂ ಸರಿಯಾದ ವ್ಯದ್ಯರು-ಸಿಬ್ಬಂದಿಗಳಿಲ್ಲ ಎಂದು ಆರೋಪಿಸಿದರು.
ಬಿಜೆಪಿ ಮುಖಂಡರಾದ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಜಿ.ಪಂ.ಸದಸ್ಯ ಚೆನ್ನಪ್ಪ ಕೋಟ್ಯಾನ್, ತಾ.ಪಂ.ಅಧ್ಯಕ್ಷ ಯಶವಂತದೇರಾಜೆ, ಆನಂದ ಶಂಭೂರು, ದೇವಪ್ಪ ಪೂಜಾರಿ, ಕೃಷ್ಣಪ್ಪ ಪೂಜಾರಿ, ದೇವದಾಸ ಶೆಟ್ಟಿ, ಗೋವಿಂದ ಪ್ರಭು, ಭಾಸ್ಕರ್ ಟೈಲರ್, ಕೃಷ್ಣಪ್ಪ ಪೂಜಾರಿ, ದಿನೇಶ್ ಭಂಡಾರಿ, ಪುರುಷೋತ್ತಮ ಸಾಲ್ಯಾನ್ ಮೊದಲಾದವರು ಪ್ರತಿಭಟನೆಯ ಪಾಳ್ಗೊಂಡರು. ತಾಲೂಕು ಆರೋಗ್ಯಾಧಿಕಾರಿ ಮಂಜುನಾಥ್ ಉಪಸ್ಥಿತರಿದ್ದರು.

ಅಧಿಕಾರಿಗಳು ಬಂದರು-ಭರವಸೆ ನೀಡಿದರು:
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ರಾಮಕೃಷ್ಣ ರಾವ್ ಹಾಗೂ ಕಟ್ಟಡದ ಇಂಜಿನಿಯರ್ ರವರನ್ನು ಪ್ರತಿಭಟನಾ ಕಾರರು ತೀವ್ರ ತರಾಟೆಗೆ ತೆಗೆದುಕೊಂಡರು. ಇಲಾಖಾ ಅಧಿಕಾರಿವರ್ಗ ಜನಪ್ರತಿನಿಧಿಗಳ ಮೇಲೆ ಒತ್ತಡ ತರುತ್ತಿಲ್ಲ, ಅಧಿಕಾರಿಗಳು ಕೈಚೆಲ್ಲಿ ಕುಳಿತಿರುವುದರಿಂದ ಕಟ್ಟಡ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿದ್ದು, ಜನಸಾಮಾನ್ಯರು ಕಷ್ಟ ಪಡುವಂತಾಗಿದೆ, ಮುಂದಿನ ಮೂರು ತಿಂಗಳ ಒಳಗಾಗಿ ಕಾಮಗಾರಿ ಮುಗಿಸುವಂತೆ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು ಮುಂದಿನ ಡಿಸೆಂಬರ್ ನ ಒಳಗಾಗಿ ಕಾಮಗಾರಿ ಪೂರ್ಣಗೊಳಿಸುವ ಭರವಸೆ ನೀಡಿದರು. ಈ ಹಿನ್ನೆಲೆಯಲ್ಲಿ ತಾತ್ಕಾಳಿಕವಾಗಿ ಪ್ರತಿಭಟನೆ ತರೆ ಕಂಡರೂ ಜನರ ಆಕ್ರೋಶವಿನ್ನೂ ತಣ್ಣಗಾಗಿಲ್ಲ. ಅಧಿಕಾರಿ ಕೊಟ್ಟ ಭರವಸೆ ಈಡೇರಿಸುತ್ತಾರೋ ಗೊತ್ತಿಲ್ಲ. ಜನತೆಯ ಮೂಲಭೂತ ಅವಶ್ಯಕತೆಗಳಲ್ಲಿ ಒಂದಾದ ಆರೋಗ್ಯ ಸೇವೆಯನ್ನು ಸಮರ್ಪಕವಾಗಿ ನೀಡುವಲ್ಲಿ ಜನಪ್ರತಿನಿದಿಗಳು ಹಾಗೂ ಅಧಿಕಾರಿವರ್ಗ ನಿರ್ಲಕ್ಷ್ಯವಹಿಸಿದರೆ ಜನರು ಬೀದಿಗಳಿಯುವುದು ಅನಿವಾರ್ಯ. ಹೀಗಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಜಿಲ್ಲೆಯ ಉಸ್ತುವಾರಿ ಸಚಿವರು ಹಾಗೂ ರಾಜ್ಯದ ಆರೋಗ್ಯಸಚಿವರದ್ದು. ಏನಾಗುತ್ತದೋ ಕಾದು ನೋಡೋಣ

By Suddi9

Leave a Reply

Your email address will not be published. Required fields are marked *