ಬಜಪೆ: ಮುಲ್ಕಿ ಠಾಣಾ ವ್ಯಾಪ್ತಿಯ ಕಿನ್ನಿಗೋಳಿ ಸಮೀಪದ ಪಾಂಪೆ ಕಾಲೇಜು ಬಳಿ ನಡೆದುಕೊಂಡು ಬರುತಿರುವ ವಿದ್ಯಾರ್ಥಿನಿಯರಿಗೆ ಓಮಿನಿ ಕಾರು ಡಿಕ್ಕಿ ಹೊಡೆದು ಒರ್ವ ವಿದ್ಯಾರ್ಥಿನಿ ಗಂಬೀರವಾಗಿ ಗಾಯಗೊಂಡ ಘಟನೆ ಇಂದು ನಡೆದಿದೆ, ಬುಧವಾರ ಮಧ್ಯಾಹ್ನ ೧ ಗಂಟೆಯ ಸುಮಾರಿಗೆ ಐಕಳ ಪಾಂಪೆ ಕಾಲೇಜಿನ ಎಂ.ಕಾಂ ವಿದ್ಯಾರ್ಥಿನಿಯರು ತರಗತಿ ಮುಗಿಸಿ ಕಾಲೇಜಿನಿಂದ ಮನೆಗೆ ಹೋಗಲು ಮೂರು ಕಾವೇರಿಗೆ ಬಸ್ಸ್ ನಿಲ್ದಾಣಕ್ಕೆ ನಡೆದುಕೊಂಡು ಸಂದರ್ಭ ಹಿಂದಿನಿಂದ ಬಂದ ಓಮಿನಿ ಕಾರು ವಿದ್ಯಾರ್ಥಿನಿಯರಿಗೆ ಡಿಕ್ಕಿ ಹೊಡೆದು ಪರಾರಿಯಾಗಿದೆ, ಗಾಯಗೊಂಡವರಲ್ಲಿ ಮುಚ್ಚೂರಿನ ಮಮತಾ ತಲೆಗೆ ಗಂಭೀರ ಗಾಯಗೊಂಡು ಮಂಗಳೂರಿನ ಖಾಸಗಿ ಅಸ್ಪತ್ರೆಗೆ ದಾಖಲಾಗಿದ್ದಾರೆ, ಇನ್ನೋರ್ವ ವಿದ್ಯಾರ್ಥಿನಿ ಅಕ್ಷತಾ ಅಲ್ಪ ಸ್ವಲ್ಪ ಗಾಯಗಳಿಂದ ಪಾರಾಗಿದ್ದಾರೆ, ಈ ಘಟನೆ ಹಿನ್ನೆಲೆಯಲ್ಲಿ ಪಾಂಪೆ ಪದವಿ ಪೂರ್ವ ಕಾಲೇಜಿನ ಸಿ ಸಿ ಕ್ಯಾಮರದಲ್ಲಿ ಕಾರು ಸಾಗಿ ಹೋದ ಬಗ್ಗೆ ಚಿತ್ರಣ ದಾಖಲಗಿದೆ, ಕಾರಿನ ಹಿಂಬಾಗದಲ್ಲಿ ಜಗ್ಬರ್ ಎಂದು ಬರೆದಿದ್ದು ಇದೇ ಒಮಿನಿ ಕಾರು ದಾಮಸ್ ಕಟ್ಟೆ ಹೋಟೇಲು ಸಮೀಪ ಅಸಂಬದ್ದವಾಗಿ ಕಾರು ಚಲಾಯಿಸಿದ್ದನ್ನು ಎಂದು ಸ್ಥಳಿಯರು ದೂರಿದ್ದಾರೆ.
DSC07151
ಸುರತ್ಕಲ್ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

By suddi9

Leave a Reply

Your email address will not be published. Required fields are marked *