ಬಜ್ಪೆ: ಬಜ್ಪೆ ಠಾಣಾ ವ್ಯಾಪ್ತಿಯ ಕೆಂಜಾರು ಎಂಬಲ್ಲಿ ದೈವಗಳ ನೇಮೋತ್ಸವ ನಡೆಯುತ್ತಿದ್ದ ವೇಳೆ ಅಂದರ್ ಬಾಹರ್ ಆಡುತ್ತಿದ್ದ ತಂಡದ ಮೇಲೆ ಗಸ್ತಿನಲ್ಲಿದ್ದ ಪಣಂಬೂರು ಎಸಿಪಿ ರವಿಕುಮಾರ್ ಮಾ.8ರ ರಾತ್ರಿ ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ. ಕೆಂಜಾರು ನಿವಾಸಿಗಳಾದ ಮುನೀರ್ ಹಾಗೂ ಸಂದೀಪ್ ಪೂಜಾರಿ ಬಂಧಿತ ಆರೋಪಿಗಳು. ಬಂಧಿತರಿಂದ ಆಟವಾಡಲು ಬಳಸುತ್ತಿದ್ದ ಇಸ್ಪೀಟ್ ಎಲೆ ಹಾಗೂ ರೂ. 5,625 ನಗದು ವಶಪಡಿಸಿಕೊಂಡಿದ್ದಾರೆ ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

By suddi9

Leave a Reply

Your email address will not be published. Required fields are marked *