ಮಂಗಳೂರು: ವಾಮಂಜೂರು ಶ್ರೀ ಅಮೃತೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳು ಮಾ.3ರಿಂದ ಮಾ.8ರವರೆಗೆ ನಡೆಯಲಿದ್ದು, ಶನಿವಾರ ವೇದಮೂರ್ತಿ ಬ್ರಹ್ಮಶ್ರೀ ಕುಡುಪು ನರಸಿಂಹ ತಂತ್ರಿಗಳ ನೇತೃತ್ವದಲ್ಲಿ ಹಾಗೂ ದೇವಳದ ಪ್ರಧಾನ ಅರ್ಚಕ ಟಿ. ಗೋಪಾಲಕೃಷ್ಣ ಭಟ್ ಉಪಸ್ಥಿತಿಯಲ್ಲಿ ಮಹಾರುದ್ರಯಾಗ, ಮಹಾ ಅನ್ನಸಂತರ್ಪಣೆ ನಡೆಯಿತು.

SAI_1124

SAI_1128

SAI_1320
ಬೆಳಗ್ಗೆ 7.00ರಿಂದ ಮಂಟಪ ನಮಸ್ಕಾರ, ಕುಂಭೇಶ ಕರ್ಕರೀ ಪೂಜೆ, ತತ್ವಕಲಶ, ತತ್ವಹೋಮ ನಡೆಯಿತು.
ಮಧ್ಯಾಹ್ನ 12.00ಕ್ಕೆ ಮಹಾರುದ್ರಯಾಗ ಪೂರ್ಣಹುತಿ, ದೇವರಿಗೆ ಪೂಜೆ ನಡೆಯಿತು. ಬಳಿಕ ಪಲ್ಲಪೂಜೆ ನಡೆದು ಮಹಾಅನ್ನಸಂತರ್ಪಣೆ ನಡೆಯಿತು. ಸಂಜೆ 6ಕ್ಕೆ ಬ್ರಹ್ಮಕಲಶ ಪೂಜೆ, ಪರಿಕಲಶ ಪೂರಣೆ, ಅಧಿವಾಸ ಹೋಮ, ಕಲಶಾಧಿವಾಸ ನಡೆಯಿತು.

ಈ ಸಂದರ್ಭ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಸೀತಾರಾಮ ಜಾಣು ಶೆಟ್ಟಿ, ಅಧ್ಯಕ್ಷ ಬಿ. ಚಂದ್ರಹಾಸ ರೈ, ಕಾರ್ಯಧ್ಯಕ್ಷ ಪುರುಷೋತ್ತಮ, ಡಾ. ದಯಾಕರ ಪೂಂಜ, ವೇದಮೂರ್ತಿ ಕೃಷ್ಣರಾಜ ತಂತ್ರಿ, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಕೆ. ಅಜಿತ್ ಕುಮಾರ್ ರೈ ಮಾಲಾಡಿ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಮೋಹನ್ ಅಮೀನ್ ಮತ್ತಿತರರು ಉಪಸ್ಥಿತರಿದ್ದರು.

ಚಿತ್ರ ವಿಶಾಲ್ ವಾಮಂಜೂರು

By Suddi9

Leave a Reply

Your email address will not be published. Required fields are marked *