ಮಂಗಳೂರು: ಯುವತಿ ಯೋರ್ವಳಿಗೆ ಕಿರುಕುಳ ನೀಡಿದ ಆರೋಪದಲ್ಲಿ ವಿದ್ಯಾರ್ಥಿ ಯೋರ್ವನನ್ನು ಸ್ಥಳೀಯ ಯುವಕರು ಹಲ್ಲೆ ನಡೆಸಿ  ಪೋಲಿಸರಿಗೆ ಒಪ್ಪಿಸಿದ ಘಟನೆ ಕೋಡಿಕಲ್ ಸಮೀಪ ನಡೆದಿದ್ದು, ವಿದ್ಯಾರ್ಥಿ ಯನ್ನು ವಶಕ್ಕೆ ಪಡೆದ ಉರ್ವ ಪೊಲೀಸರು ಬಳಿಕ ಆತನನ್ನು ಮಹಿಳಾ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ನಗರದ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿರುವ ಕೇರಳ ಮೂಲದ ಮುಹಮ್ಮದ್ ಶಾಫಿ (22)ಬಂಧಿತ ಆರೋಪಿ.shafi111 ಕೋಡಿಕಲ್‍ನಲ್ಲಿ ರೂಮ್ ಮಾಡಿ ಕೊಂಡಿರುವ ಈತ ಶುಕ್ರವಾರ ಮಧ್ಯಾಹ್ನ 1:30ರ ಸುಮಾರಿಗೆ ಯುವತಿಯೋರ್ವಳು ಪುಟ್ಟ ಮಗುವಿ ನೊಂದಿಗೆ ರಸ್ತೆಯಲ್ಲಿ ನಡೆದು ಹೋಗುತ್ತಿದ್ದಾಗ ಕೆಟ್ಟದ್ದಾಗಿ ಮಾತ ನಾಡಿದ್ದ ಎನ್ನಲಾಗಿದೆ. ಇದನ್ನು ಗಮನಿಸಿದ ಸ್ಥಳೀಯರು ಆತನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ಉರ್ವ ಪೊಲೀಸರು ಸ್ಥಳಕ್ಕೆ ಆಗಮಿಸಿ ಆರೋಪಿ ಯನ್ನು ವಶಕ್ಕೆ ತೆಗೆದು ಕೊಂಡಿದ್ದು ಬಳಿಕ ಮಹಿಳಾ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

By suddi9

Leave a Reply

Your email address will not be published. Required fields are marked *