ವಿಟ್ಲ: ಕರೋಪಾಡಿ ಗ್ರಾಮದ ಅರಸಳಿಕೆ ಗ್ರಾಮದ ನಿವಾಸಿ ಇಸಮಾಯಿಲ್ ಅವರ ಪುತ್ರಿ ಕನ್ಯಾನ ಸರಕಾರಿ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಕಲಂದರ್ ಬೇಬಿ ಸಮಯ್ಯ(17) ಕೇರಳದಲ್ಲಿ ಪತ್ತೆಯಾಗಿದ್ದಾಳೆ ಎಂಬ ವರ್ತಮಾನ ಲಭಿಸಿದೆ.
ಈಕೆಯನ್ನು ಕನ್ಯಾನ ಗ್ರಾಮದ ಪೊಯ್ಯೆಗದ್ದೆ ನಿವಾಸಿ ಇಕ್ಕು ಯಾನೆ ಇಕ್ಬಾಲ್(23) ಅಪಹರಿಸಿ ಕೇರಳಕ್ಕೆ ಕರೆದೊಯ್ದಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದು ಈ ಕಾರಣದಿಂದ ಇಕ್ಬಾಲ್ ಆಕೆಯನ್ನು ತನ್ನ ಗೆಳೆಯರ ಸಹಾಯದಿಂದ ಅಪಹರಿಸಿ ಕೇರಳದ ಬಾಡಿಗೆ ಮನೆಯೊಂದರಲ್ಲಿದ್ದಾರೆ ಎನ್ನಲಾಗುತ್ತಿದೆ.
ಆದರೆ ಇಕ್ಬಾಲ್ ಮನೆಯವರು ಇಕ್ಬಾಲ್ ಮುಂಬೈಗೆ ತೆರಳಿದ್ದಾನೆನ್ನುವುದು ಸಂಶಯಕ್ಕೆ ಕಾರಣವಾಗಿದೆ.
