ಬೆಂಗಳೂರು: ಸೂಪರ್ ಸ್ಟಾರ್ ರಜನಿಕಾಂತ್ ತಮ್ಮ ಮಾನವೀಯ ಗುಣಗಳಿಂದಲೇ ಹೆಚ್ಚು ಹೆಸರುಗಳಿಸಿದವರು. ಗೆಳೆಯರು , ಬಂಧು ಮಿತ್ರರಿಗೆ ಅವರ ಸಹಾಯ ಎಂದೂ ಇದ್ದೇ ಇದೆ.  ಕನ್ನಡ ಚಿತ್ರರಂಗದ ನಿರ್ದೇಶಕ ರವಿಂದ್ರನಾಥ್ ಕಳೆದ ದಿನ ಹೈದರಬಾದ್ ನ  ರೈಲ್ವೇ ನಿಲ್ದಾಣದಲ್ಲಿ ಹೃದಯಾಘಾತದಿಂದ ಮರಣ ಹೊಂದಿದ್ದರು. ಅವರ ಸಹೋದರರು ದೂರದ ಮುಂಬೈಯಲ್ಲಿ ನೆಲೆಸಿರುವ ಕಾರಣ ಸರಿಯಾದ ಮಾಹಿತಿ ಪಡೆಯದೆ ಪೊಲೀಸರು ಶವವನ್ನು ಸಂಬಂಧಿಕರಿಗೆ ನೀಡಲು ಹಿಂಜರಿದಿದ್ದರು. ಕೂಡಲೇ ಸ್ಥಳಕ್ಕಾಗಮಿಸಿದ ರಜನಿಕಾಂತ್ ತನ್ನ ಬಾಲ್ಯದ ಗೆಳೆಯನ ಸರಿಯಾದ ಮಾಹಿತಿಯನ್ನು ಪೊಲೀಸರಿಗೆ ನೀಡಿ ಮುಂದಿನ ಕಾರ್ಯ ಸಲೀಸಾಗಿ ನಡೆಯುವಂತೆ ನೊಡಿಕಕೊಂಡರು. ರಜನಿ ಹಾಗೂ ರವೀದ್ರನಾಥ್ ಚಿಕ್ಕ ವಯಸ್ಸಿನಲ್ಲಿ ಜೊತೆಯಾಗಿ ಶಾಲೆ ಕಲಿತವರು. ಈ ನೆನಪನ್ನು ರಜನಿ ಇಂದು ಕೂಡಾ ಮರೆತಿಲ್ಲ. ವೀರಪ್ಪನ್ ಚಿತ್ರದ ಮೂಲಕ ಖ್ಯಾತಿಗೆ ಬಂದ ರವೀಂದ್ರನಾಥ್ ತಮ್ಮ ದೇಹವನ್ನು ಎಂ.ಎಸ್ ರಾಮಯ್ಯ ಆಸ್ಪತ್ರೆಗೆ ದಾನವಾಗಿ ನೀಡುವುದಾಗಿ ಹೇಳಿಕೊಂಡಿದ್ದರು. ಅಂತೆಯೇ ಅವರ ಮೃತದೇಹವನ್ನು ಆಸ್ಪತ್ರೆಯ ಸುಪರ್ದಿಗೆ ಒಪ್ಪಿಸಲಾಯಿತು. ಬದುಕಿರುವವರಿಗೆ ಸದಾ ನೆರವಾಗುವ ರಜನಿ ತನ್ನ ಗೆಳೆಯನಿಗೆ ಸಾವಿನಲ್ಲೂ ನೆರವಾಗಿ ಆತನ ಅಂತಿಮ ಯಾತ್ರೆ ಸುಗಮವಾಗುವಂತೆ ನೋಡಿಕೊಂಡರು.rajani

By suddi9

Leave a Reply

Your email address will not be published. Required fields are marked *