
ಬೆಂಗಳೂರು: ಹುಡುಗರು ಸಿನಿಮಾ ಭಾರೀ ಯಶಸ್ಸು ಗಳಿಸಿದ ನಂತರ ಪುನೀತ್ ಯಾವುದೇ ರಿಮೇಕ್ ಸಿನಿಮಾಗಳಲ್ಲಿ ಕಂಡುಬಂದಿರಲಿಲ್ಲ. ಆದರೆ ಇತ್ತೀಚೆಗಿನ ವರದಿಗಳನ್ನು ನಂಬುವುದಾದರೆ ಪುನೀತ್ ಅತಿ ಶೀಘ್ರದಲ್ಲಿ ಮತ್ತೊಂದು ರಿಮೇಕ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗೆ ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ತೆರೆಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿರುವ ನಿಮಿರ್ ಂದ್ ನಿಲ್ಲ್ ಚಿತ್ರದ ಕನ್ನಡಾವತರಿಣಿಕೆಯಲ್ಲಿ ಪುನೀತ್ ಕಾಣಿಸಿಕೊಳ್ಳಲಿದ್ದಾರೆ. ನಿಮಿರ್ಂದ್ ನಿಲ್ ಚಿತ್ರವನ್ನು ಸಮುದಿರಕಣಿ ನಿರ್ದೇಶಿಸಿದ್ದು ಸದ್ಯ ಈ ಚಿತ್ರವನ್ನು ಕನ್ನಡ ಮತ್ತು ಹಿಂದಿ ಭಾಷೆಯಲ್ಲೂ ನಿರ್ಮಿಸುವ ಅಭಿಲಾಷೆ ಹೊಂದಿದ್ದಾರೆ. ವಿಶೇಷವೆಂದರೆ ಹುಡಗರು ಚಿತ್ರದ ಮೂಲ ಸಿನಿಮಾ ನಾಡೋಡಿಗಳ್ ಚಿತ್ರವನ್ನು ಕೂಡಾ ಸಮುದಿರಕಣಿ ನಿರ್ದೇಶಿಸಿದ್ದರು.
