ಬೆಂಗಳೂರು: ತನ್ನಡದ ಮೊದಲ ಕ್ರೀಡಾ ಪತ್ರಿಕೆ ರಾಜು ಪತ್ರಿಕೆಯ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದ ಪತ್ರಕರ್ತ ಹಾಗೂ ಚಿತ್ರ ನಿರ್ಮಾಪಕ ಸನತ್ ಕುಮಾರ್ ಬುಧವಾರ ವಿಧಿವಶರಾಗಿದ್ದಾರೆ. ಎದ್ದೇಳು ಮಂಜುನಾಥ ಚಿತ್ರವನ್ನು ನಿರ್ದೇಶಿಸಿದ್ದ ಅವರು ಅತಿ ಸಣ್ಣ ವಯಸ್ಸಿನಲ್ಲೇ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದರು. ದೀರ್ಘ ಸಮಯದವರೆಗೆ ಅವರು ಆಸ್ಟ್ರೇಲಿಯನ್ ರೇಡಿಯೊದಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. 2 ವರ್ಷಗಳ ಹಿಂದೆ ಅನಿವಾರ್ಯವಾಗಿ ಅವರ ಒಂದು ಕಾಲನ್ನು ಕತ್ತರಿಸಿ ತೆಗೆಯಲಾಗಿತ್ತು. ಆನಂತರ ಬಹಳ ಸಮಯದವರೆಗೆ ಹಾಸಿಗೆ ಹಿಡಿದಿದ್ದ ಸನತ್ ನಂತರ ಪುನಃ ಸಾರ್ವಜನಿಕ ಜೀವನದಲ್ಲಿ ಸಕ್ರಿಯರಾದರು. ಹಲವು ಸಮಯದಿಂದ ಕರುಳು ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಸನತ್ ಬುಧವಾರದಂದು ಕೊನೆಯುಸಿರೆಳೆದಿದ್ದಾರೆ.

