ahivraj
ಬೆಂಗಳೂರು:  ಪರ್ಯಾಯ  ಒಕ್ಕೂಟಕ್ಕೆ ಅನುಮತಿ ನೀಡಬಾರದು ಎಂದು ಆಗ್ರಹಿಸಿ ಅಶೋಕ್ ನೇತೃತ್ವದ ಕಾರ್ಮಿಕರ ಒಕ್ಕೂಟ ನಡೆಸುತ್ತಿರುವ ಪ್ರತಿಭಟನೆಯು ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಮಧ್ಯಸ್ಥಿಕೆಯಲ್ಲಿ ಸುಖಾಂತ್ಯಗೊಂಡಿದೆ.  ಇತರ ಚಿತ್ರರಂಗಗಳ ಜೊತೆಗೆ ಸಮಾಲೋಚನೆ ನಡೆಸಿ ಕಾರ್ಮಿಕರ ಸಂಕಷ್ಟಕ್ಕೆ ಸೂಕ್ತ ಪರಿಹಾರ ಒದಗಿಸುವುದಾಗಿ ಶಿವರಾಜ್ ಕುಮಾರ್  ಹೇಳಿದ ನಂತರ ಪ್ರತಿಭಟನಾಕಾರರು ಧರಣಿಯನ್ನು ಹಿಂತೆಗೆದರು. ಕೆಲವು ದಿನಗಳಿಂದ ನಡೆಯುತ್ತಿರುವ ಕಾರ್ಮಿಕರ ಪ್ರತಿಭಟನೆಯ ಪರಿಣಾಮವಾಗಿ ಸ್ಯಾಂಡಲ್ ವುಡ್ ನಲ್ಲಿ ಹಲವು ಚಿತ್ರಗಳ ಚಿತ್ರೀಕರಣ ಸ್ಥಗಿತಗೊಂಡಿದೆ. ಇದರಿಂದ ಕನ್ನಡ ಚಿತ್ರರಂಗ ಅರಾಜಕತೆಯತ್ತ ಸಾಗುತ್ತಿತ್ತು. ಕೇವಲ ಕನ್ನಡ ಚಿತ್ರಗಳಲ್ಲದೆ ಪ್ರಾದೇಶಿಕ ಸಿನಿಮಾಗಳೂ ಪ್ರತಿಭಟನೆಯ ಬಿಸಿಯಿಂದ ತತ್ತರಿಸಿದ್ದವು. ಸದ್ಯ ಶಿವರಾಜ್ ಕುಮಾರ್ ಕಾರ್ಮಿಕ ಮುಖಂಡರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದು ಚಿತ್ರಂಗ ಮತ್ತೆ ಎಂದಿನಂತೆ ಕಾರ್ಯ ನಿರ್ವಹಿಸಲಿದೆ.

By Suddi9

Leave a Reply

Your email address will not be published. Required fields are marked *