ಮಂಡ್ಯ(ಮಾ.19)​: ಸಂಸದೆ ಹಾಗೂ ನಟಿ ರಮ್ಯಾ ವಿರುದ್ಧ ನಾನು ಯಾವುದೇ ಪತ್ರ ಬರೆದಿಲ್ಲ; ಕೆಪಿಸಿಸಿ ಅಧ್ಯಕ್ಷರಿಗೂ ಕೂಡ ಪತ್ರ ಬರೆದಿಲ್ಲ ಎಂದು ಮಂಡ್ಯದಲ್ಲಿ ಇಂದು ಮಾಜಿ ಸಂಸದ ಜಿ. ಮಾದೇಗೌಡ ಹೇಳಿದ್ದಾರೆ. ರಮ್ಯಾ ನಡತೆ ಸರಿಯಿಲ್ಲವೆಂದ ಈ ಹಿಂದೆ ಪತ್ರ ಬರೆಲಾಗಿತ್ತೆಂಬ ಮಾತುಗಳಿಗೆ ಪ್ರತಿಕ್ರಿಯಿಸಿದ ಮಾದೇಗೌಡರು, ತಾನಂಥ ಕೆಲಸ ಮಾಡಿಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ramya
ಸಂಸದೆಯಾಗಿ ರಮ್ಯಾ ಉತ್ತಮ ಕೆಲಸ ಮಾಡುತ್ತಿದ್ದಾರೆ. ಆಕೆ ಬಗ್ಗೆ ತನಗೆ ಒಳ್ಳೆಯ ಅಭಿಪ್ರಾಯವಿದೆ ಎಂದು ಹೇಳಿರುವ ಮಾದೇಗೌಡರು, ತನ್ನ ಹೆಸರಿನಲ್ಲಿ ಯಾರೋ ಪತ್ರ ಬರೆದಿರಬಹುದು ಎಂದು ಶಂಕಿಸಿದ್ದಾರೆ. ತನ್ನ ವಿರುದ್ಧ ಅಪಪ್ರಚಾರ ಮಾಡಲೆಂದೇ ಯಾರೋ ಈ ಕೃತ್ಯ ಎಸಗಿದ್ದಾರೆ ಎಂದೂ ಮಾದೇಗೌಡರು ಹೇಳಿದ್ದಾರೆ.

ಇದೇ ವೇಳೆ, ತನ್ನ ಹೆಸರಿನಲ್ಲಿ ಪತ್ರ ಬರೆದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆಯೂ ಹಿರಿಯ ಕಾಂಗ್ರೆಸ್ಸಿಗ ಮಾದೇಗೌಡರು ಕಾಂಗ್ರೆಸ್ ಹೈಕಮಾಂಡನ್ನ ಆಗ್ರಹಿಸಿದ್ದಾರೆ.

By suddi9

Leave a Reply

Your email address will not be published. Required fields are marked *