ಬೆಂಗಳೂರು: ಇಸಿಸ್ ಉಗ್ರ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುವ ಟ್ವಿಟರ್ ಖಾತೆ ನಿರ್ವಹಿಸಿದ ಆರೋಪದ ಮೇಲೆ ಬಂಧಿತನಾಗಿರುವ ಉಗ್ರ ಮೆಹ್ದಿ ಮಸ್ರೂರ್ ಬಿಸ್ವಾಸ್, ಒಬ್ಬ ಹಿಂದೂ ಸೇರಿದಂತೆ ಇಬ್ಬರನ್ನು ಇಸಿಸ್ ಬಗ್ಗೆ `ಬ್ರೈನ್ ವಾಷ್’ ಮಾಡಿದ್ದ ಎನ್ನುವ ಸ್ಫೋಟಕ ಮಾಹಿತಿ ಸಿಸಿಬಿ ಪೋಲೀಸರ ತನಿಖೆ ವೇಳೆ ಬಯಲಾಗಿದೆ.

mehdiಚೆನ್ನೈ ಹಾಗೂ ಬೆಂಗಳೂರಿನ ಇಬ್ಬರ ಹೇಳಿಕೆಗಳನ್ನು ಪೋಲೀಸರು ಸಿಆರ್‍ಪಿಸಿ ಕಲಂ 164 ಅನ್ವಯ ನ್ಯಾಯಾಲಯದ ಮುಂದೆ ರೆಕಾರ್ಡ್ ಮಾಡಿದ್ದಾರೆ. ಆದರೆ, ಇಬ್ಬರ ಹೆಸರನ್ನು ಬಹಿರಂಗಪಡಿಸಲು ಅಧಿಕಾರಿಗಳು ನಿರಾಕರಿಸಿದ್ದಾರೆ. ಇಸಿಸ್ ಚಟುವಟಿಕೆಗಳ ಪರ ಶಮ್ಮಿ ವಿಟ್ನೆಸ್ ಹೆಸರಿನಲ್ಲಿ ಟ್ವಿಟರ್ ಖಾತೆ ನಿರ್ವಹಿಸುತ್ತಿದ್ದ ಮೆಹ್ದಿಯನ್ನು ಬಂಧಿಸಿದ ಬಳಿಕ ಖಾತೆಯಲ್ಲಿದ್ದ 1 ಲಕ್ಷ 20 ಸಾವಿರಕ್ಕೂ ಅಧಿಕ ಟ್ವೀಟ್‍ಗಳನ್ನು ಸಿಸಿಬಿ ಪೋಲೀಸರು ಪರಿಶೀಲಿಸುತ್ತಿದ್ದಾರೆ. ಈ ವೇಳೆ ಇಬ್ಬರೊಂದಿಗೆ ಮೆಹ್ದಿ ಹೆಚ್ಚು ಚಾಟಿಂಗ್ ಮಾಡುತ್ತಿದ್ದ.

By suddi9

Leave a Reply

Your email address will not be published. Required fields are marked *