*ಯುವ ಸಂಘ ಸಂಸ್ಥೆಗಳು ಸಮಾಜಸೇವಾ ಕಾರ್ಯಕ್ರಮಗಳನ್ನು ಹೆಚ್ಚಿಸಬೇಕು*
*ಸಮಾಜ ಸೇವಾ ಚಟುವಟಿಕಗಳನ್ನು ಹೆಚ್ಚಿಸುವ ಮೂಲಕ ಸಮಾಜದಲ್ಲಿರುವ ಅಸಕ್ತರಿಗೆ ಯುವ ಸಂಘ ಸಂಸ್ಥೆಗಳು ಅಸರೆಯಾಗಲೇಬೇಕು ಮತ್ತು ಗ್ರಾಮೀಣ ಸಾಧಕರನ್ನು ಪ್ರತಿಭೆಗಳನ್ನು ಗೌರವಿಸುವುದು ಅತ್ಯಂತ ಸೂಕ್ತ.* ಎಂದು ಶಾಸ್ತವು ಶ್ರೀಭೂತನಾಥೇಶ್ವರ ದೇವಳದ ಆಡಳಿತ ಮೊಕ್ತೇಸರ ವಿಜಯನಾಥ ವಿಠಲ ಶೆಟ್ಟಿ ಅವರು ಹೇಳಿದರು.
ತೆಂಕ ಎಡಪದವು ಶಾಲೆ ಹಾಗೂ ಬಂಡಸಾಲೆ ಕೀರ್ತಿ ಫ್ರೆಂಡ್ಸ್ ಸರ್ಕಲ್‍ನ 29ನೇ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇದೇ ಸಂದರ್ಭ ನಿವೃತ್ತ ಶಿಕ್ಷಕಿ ಅಪ್ಪಿ ಟೀಚರ್ ಅವರನ್ನು ಸನ್ಮಾನಿಸಲಾಯಿತು. ನೆಟ್‍ಬಾಲ್ ಸ್ಪರ್ಧೇಯಲ್ಲಿ ಪ್ರಶಸ್ತಿ ಪಡೆದ ಎಡಪದವು ತಂಡವನ್ನು ಪ್ರತಿನಿಸಿದ್ಧ ಅಭಿಲಾಷೆ, ಕೀರ್ತನ್ ದುರ್ಗಾ ಪ್ರಸಾದ್, ಚಂದ್ರ ಮೋಹನ್, ಮಿಥುನ್ ಅವರನ್ನು ಪುರಸ್ಕರಿಸಲಾಯಿತು.

26vm yedapadav
ಕಿಡ್ನಿ ವೈಫಲ್ಯದಿಂದ ತೀವ್ರವಾಗಿ ಬಳಲುತ್ತಿರುವ ಚಂದ್ರ ಮೋಹನ್ ಇವರಿಗೆ ರೂ. 5 ಸಾವಿರ ಸಹಾಯ ಧನ ವಿತರಿಸಲಾಯಿತು.
ಎಂ. ಜೀವಂಧರ ಕುಮಾರ್, ಪೃಥ್ವಿರಾಜ್ ಆರ್. ಕೆ, ನೋರ್ಬರ್ಟ್ ಮಥಾಯಸ್, ಮುರಳೀಧರ ಶೆಟ್ಟಿ, ನವೀನ್ ಕುಮಾರ್, ಧರ್ಮಪಾಲ ಇಂದ್ರ, ಕೃಷ್ಣ ನಾಯಕ್, ಶಾಲಾ ಮುಖ್ಯ ಶಿಕ್ಷಕ ಮಾಧವ ಶೆಣೈ, ಜಗದೀಶ್ ಅಕಾರಿ ಉಪಸ್ತಿತರಿದ್ದರು.
ಸಂಘದ ಅಧ್ಯಕ್ಷ ಪ್ರಸಾದ್ ಕುಮಾರ್ ಎಂ. ಸ್ವಾಗತಿಸಿದರು.
ದಯಂನಂದ ಪೂಜಾರಿ ವರದಿ ವಾಚಿಸಿದರು. ಚಂದ್ರಶೇಖರ ಸಪಳಿಗ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *