ಸ್ಟಿರಾಯ್ಡ್ ಬಳಕೆಯಿಂದ ದೈಹಿಕ  -ಮಾನಸಿಕ ಸ್ವಾಸ್ಥ್ಯಕ್ಕೆ ಹಾನಿ.
ಬಜಪೆ: ಸ್ಪರ್ಧಾತ್ಮಕತೆಯ ಮಧ್ಯೆ ಸ್ಟಿರಾಯ್ಡ್ ಸೇವನೆಯಂತಹ ವ್ಯಸನಗಳು ಯುವ ಜನರ, ಕ್ರೀಡಾ ಪಟುಗಳ ದೈಹಿಕ ಮಾನಸಿಕ ಸ್ವಾಸ್ಥ್ಯಕ್ಕೆ ಮಾರಕ ಪರಿಣಾಮ ಬೀರುವುದು. ಬದಲಾಗಿ ಪ್ರಾಕೃತಿಕವಾಗಿಯೂ ಆರೋಗ್ಯ ಹಾಗೂ ಸೌಂಧರ್ಯವೃದ್ಧಿ ಸಾಧ್ಯವಿದೆ. ಸಾಮಾಜಿಕವಾಗಿಯೂ ಸಾಮಾರಸ್ಯ ಮೂಡಿಸುವ ಶಕ್ತಿ ಕ್ರೀಡಾ ಚಟುವಟಿಕೆಗಳಿಗೆ ಇದೆ. ಎಂದು ಆಸರೆ ಚಾರಿಟೇಬಲ್ ಟ್ರಸ್ಟ್‍ನ ಅಧ್ಯಕ್ಷತೆ ಡಾ| ಆಶಾ ಜ್ಯೋತಿ ಅವರು ಹೇಳಿದರು.
ಅವರು ಭಾನುವಾರ ರಾತ್ರಿ ಬಜಪೆ ಕೇಂದ್ರ ಮೈದಾನದಲ್ಲಿ ಶಕ್ತಿ ಫ್ರೆಂಡ್ಸ್ ಹಾಗೂ ದ.ಕ.ಜಿಲ್ಲಾ ಬಾಡಿ ಬಿಲ್ಡರ್ಸ್ ಅಸೋಸಿಯೇಶನ್ ಸಹಭಾಗಿತ್ವದಲ್ಲಿ ಜರಗಿದ *ಮಿಸ್ಟರ್ ದಕ್ಷಿಣ ಕನ್ನಡ-2015* ದೇಹದಾಢ್ರ್ಯ ಸ್ಪರ್ಧೆಯ ಉದ್ಘಾಟನಾ ಸಮಾರಂಭದ ಅರ್ಧಯಕ್ಷತೆ ವಹಿಸಿ ಮಾತನಾಡಿದರು. ಗುರುಪುರ ವಜ್ರದೇಹಿ ಶ್ರೀ ರಾಜಶೇಖರಾನಂಧ ಸ್ವಾಮೀಜಿ ಅವರು ಕಾರ್ಯಕ್ರಮ ಉದ್ಘಾಟಿಸಿ ಶುಭಾ ಹಾರೈಸಿ ಮಾತನಾಡಿ * * ಸಾಮೂಹಿಕ ಪ್ರಯತ್ನಕ್ಕೆ ಯಶಸ್ಸು ಖಚಿತ ಜತೆಗೆ ನಾಡಿನ ಸಂಸ್ಕಾರ-ಸಂಸ್ಕøತಿಗಳನ್ನು ಪ್ರೀತಿಸುವ ಪ್ರಸರಿಸುವ ಕರ್ತವ್ಯವನ್ನು ಶ್ರದ್ಧೆಯಿಂದ ನಿಭಾಯಿಸಬೇಕು. ಎಂದರು.
ಹಗ್ಗeಗ್ಗಾಟ ಸ್ಪರ್ಧೆಯ ವಿಜೇತರಾದ ಪೊರ್ಲು ಫ್ರೆಂಡ್ಸ್ ಫೊರ್ಕೋಡಿ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವಿಕಲಚೇತನ ವಿಭಾಗದ ದೇಹದಾಡ್ರ್ಯ ಸ್ಪರ್ಧೆಯ ವಿಜೇತರಾದ ಜಗದೀಶ್ ಪೂಜಾರಿ ಅವರಿಗೆ *ಮಿಸ್ಟರ್ ದಕ್ಷಿಣ ಕನ್ನಡ-2015* ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಮಾಜಸೇವಕ ಕಾಂತಾಡಿಗುತ್ತು ಹರೀಶ್ ಪೆರ್ಗಡೆ, ದೇಹದಾಢ್ರ್ಯ ಪಟುಗಳಾದ ದಿಲೀಪ್ ಕುಮಾರ್, ನಾಗೇಶ್ ಅವರನ್ನು ಗಣ್ಯರ ಉಪಸ್ಥಿತಿಯಲ್ಲಿ ಸನ್ಮಾನಿಸಲಾಯಿತು.
ಜಿ.ಪಂ.ಸದಸ್ಯ ರಿತಾಶ್ ಶೆಟ್ಟಿ, ತಾ.ಪಂ. ಸದಸ್ಯ ಜೋಕಿಂ ಡಿ*ಕೋಸ್ತಾ, ಜಗದೀಶ ಅಕಾರಿ, ಸೇಸಪ್ಪ ರೈ, ನಗರ ನಾರಾಯಣ ಶೆಣೈ, ಉದ್ಯಮಿಗಳಾದ ಕೃಷ್ಣ ಕಲ್ಲೋಡಿ ಹಾಗೂ ರಫೀಕ್ ಉಪಸ್ಥಿತರಿದ್ಧರು.
ಶರತ್ ಶೆಟ್ಟಿ ಕಿನ್ನಿಗೋಳಿ ಕಾರ್ಯಕ್ರಮ ನಿರೂಪಿಸಿದರು.24vm Sanmana

By suddi9

Leave a Reply

Your email address will not be published. Required fields are marked *