ಬಜ್ಪೆ: ಇತ್ತೀಚೆಗೆ ಕಿಡಿಗೇಡಿಗಳಿಂದ ಹಾನಿಗೊಳಗಾದ ಬಜ್ಪೆ ಕೇಂದ್ರ ಜುಮಾ ಮಸೀದಿ ಹಾಗೂ ಪೊರ್ಕೋಡಿಯ ರಹ್ಮಾನಿಯ ಜುಮಾ ಮಸೀದಿ (ಈದ್ಗಾ)ಗೆ ಕರ್ನಾಟಕ ರಾಜ್ಯ ವಕ್ಪ್ ಭೋರ್ಡ್ ಸದಸ್ಯ ಹಾಗೂ ಕರ್ನಾಟಕ ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಎನ್.ಕೆ.ಎಮ್ ಶಾಫೀ ಸಅದಿ ಭೇಟಿ ಗುರುವಾರ ನೀಡಿದರು.
20 bajpe 1
ನಂತರ ಸ್ಥಳೀಯ ಪೊಲೀಸ್ ಠಾಣಾಧಿಕಾರಿಯನ್ನು ಭೇಟಿ ಮಾಡಿ ತಪ್ಪಿತಸ್ಥರನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಂಡು ಬಜ್ಪೆ ಪರಿಸರದಲ್ಲಿ ಶಾಂತಿ ಕಾಪಾಡುವಂತೆ ಆಗ್ರಹಿಸಿದರು. ವಕ್ಪ್ ಬೊರ್ಡ್ನಿಂದ ಸಾಧ್ಯವಾಗುವ ಪರಿಹಾರಕ್ಕಾಗಿ ಶ್ರಮಿಸುವುದಾಗಿ ಭರವಸೆ ನೀಡಿದರು. ಇಶಾರ ಪಾಕ್ಷಿಕ ಸಂಪಾದಕ ಅಬ್ದುಲ್ ಹಮೀದ್ ಬಜ್ಪೆ, ಎಸ್ಸೆಸ್ಸೆಫ್ ಜಿಲ್ಲಾ ನಾಯಕರುಗಳಾದ ಅಶ್ರಫ್ ಕಿನಾರ ಹಾಗೂ ಇಸ್ಮಾಯಿಲ್ ಸಅದಿ ಕಿನ್ಯಾ, ಗ್ರಾಮ ಪಂಚಾಯತ್ ಸದಸ್ಯ ಮನ್ಸೂರ್, ಸ್ಥಳೀಯ ಎಸ್ವೈಸ್ ಹಾಗು ಎಸ್ಎಸ್ಎಫ್ ಮುಖಂಡರುಗಳಾದ ಹನೀಫ್ ಹಾಜಿ, ರಿಯಾಜ್ ಸಅದಿ, ಅಶ್ರು ಬಜ್ಪೆ (ಕೆಸಿಎಫ್ ದಮಾಮ್), ಸುಪಿಯಾನ್, ಖಾದರ್, ಶಾಫಿ, ಅಶ್ರಫ್, ತೌಸೀಪ್ ಉಪಸ್ಥಿತರಿದ್ದರ

By suddi9

Leave a Reply

Your email address will not be published. Required fields are marked *