ಬಜ್ಪೆ: ಖಾಸಗಿ ಬಸ್ ಹಾಗೂ ಟೂರಿಸ್ಟ್ ಬಸ್ ಮುಖಾಮುಖಿ ಡಿಕ್ಕಿ ಹೊಡೆದು ಖಾಸಗಿ ಬಸ್ ಚಾಲಕ ಗಂಭೀರ ಗಾಯಗೊಂಡು ಬಸ್ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳಿಂದ ಪಾರಾದ ಘಟನೆ ಗುರುವಾರ ಸಂಜೆ 5.30ರ ಸುಮಾರಿಗೆ ಕಟೀಲು ಸಮೀಪದ ಗಿಡಿಗೆರೆ ಎಂಬಲ್ಲಿ ಸಂಭವಿಸಿದೆ.

ಕಟೀಲು ಸಮೀಪದ ಗಿಡಿಗೆರೆ ಎಂಬಲ್ಲಿ ಬಸ್ಗಳೆರಡು ಮುಖಾಮುಖಿ ಡಿಕ್ಕಿಹೊಡೆದಿರುವುದು.
19 bajpe1

19 bajpe2
ಗಂಭೀರವಾಗಿ ಗಾಯಗೊಂಡ ಬಸ್ ಚಾಲಕನನ್ನು ಬಜ್ಪೆಯ ಮಂಜುನಾಥ್ ಎಂದು ಗುರುತಿಸಲಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಅದರ ಜೊತೆಗೆ ಬಜ್ಪೆಯ ಇಂದಿರಾ, ರೇಣುಕಾ, ಸುಪ್ರಿಯಾ, ಮಮತಾ, ಜ್ಯೋತಿ, ಕಾವೂರಿನ ಕೋಕಿಲಾ ಹಾಗೂ ಟೂರಿಸ್ಟ್ ಬಸ್ನಲ್ಲಿದ್ದ ತುಮಕೂರು ಮೂಲದ ಜ್ಯೋತಿ, ಸೌಮ್ಯ, ಕಾವೇರಮ್ಮ, ಗಂಗಾಧರ, ರಾಜೇಶ್, ವಿದ್ಯಾ, ಯಶೋದಮ್ಮ, ಹರೀಶ್, ಶ್ಯಾಮಲಾ ಮಗು ದಿವ್ಯಾ ಹೀಗೆ ಒಟ್ಟು 20 ಮಂದಿ ಪ್ರಯಾಣಿಕರನ್ನು ಮಂಗಳೂರು ಹಾಗೂ ಕಿನ್ನಿಗೋಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಿನ್ನಿಗೋಳಿ ಕಡೆಯಿಂದ ಕಟೀಲು ಕಡೆಗೆ `ಫೈತ್’ ಎನ್ನುವ ಬಸ್ ಹಾಗೂ ಬಜ್ಪೆಯಿಂದ ಮೂಡಬಿದ್ರೆಗೆ ಸಂಚರಿಸುತ್ತಿದ್ದ ಟೂರಿಸ್ಟ್ ಬಸ್ ಕಟೀಲು ಸಮೀಪದ ಗಿಡಿಗೆರೆ ಎಂಬಲ್ಲಿ ಪರಸ್ಪರ ಮುಖಾಮುಖಿ ಡಿಕ್ಕಿ ಹೊಡೆಯಿತು ಎನ್ನಲಾಗಿದೆ. ಈ ವೇಳೆ ಬಸ್ ಡ್ರೈವರ್ನ ಕಾಲಿಗೆ ಏಟಾಗಿದೆ. ಸ್ಥಳಕ್ಕಾಗಮಿಸಿದ ಪೊಲೀಸರು ತಕ್ಷಣ ಸ್ಥಳೀಯರ ಸಹಾಯದಿಂದ ಗಾಯಾಳು ಬಸ್ ಚಾಲಕನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಬಸ್ನಲ್ಲಿದ್ದ ಮಕ್ಕಳು ಮಹಿಳೆಯರು ಸೇರಿ ಸುಮಾರು 20 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿದೆ ಎಂದು ತಿಳಿದುಬಂದಿದೆ. ಘಟನೆಯಲ್ಲಿ ಟೂರಿಸ್ಟ್ ಬಸ್ನ ಚಾಲಕ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಗಾಯಾಳುವಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಾಗಿದೆ. ಬಜ್ಪೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಬಸ್ಗಳೆರರ ಮುಂಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಘಟನೆಯಿಂದ ರಸ್ತೆ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

By suddi9

Leave a Reply

Your email address will not be published. Required fields are marked *