ಕೈಕಂಬ: ಎಡಪದವಿನ ಕಾಡಬರಿ ಎಂಬಲ್ಲಿನ `ಫಾಲ್ಕನ್’ ಹೆಸರಿನ ಕಲ್ಲುಕ್ವಾರೆಯ ಕೆಲಸದ ವೇಳೆಯಲ್ಲೇ 70 ಅಡಿ ಆಳದ ಕಂದಕಕ್ಕೆ ಬಿದ್ದು ಕಾಮೀಕನೋರ್ವ ಗಂಭೀರ ಸ್ಥಿತಿಯಲ್ಲಿ ಗಾಯಗೊಂಡು ಇದೀಗ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಆದರೆ ಕ್ವಾರೆ ಮಾಲಕರು ಮಾತ್ರ ಗುಂಡಿಗೆ ಬಿದ್ದು ಮೃತಪಟ್ಟ ವ್ಯಕ್ತಿ ತಮ್ಮ ಕ್ವಾರಿಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕನಲ್ಲ ಎಂದು ಹೇಳಿ ಪ್ರಕರಣವನ್ನು ಮುಚ್ಚಿ ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಪ.ಬಂಗಾಳದ ಕಾರ್ಮಿಕ ಹಕೀಬುಲ್ಲಾ ಎಂಬವರೇ ಕ್ವಾರೆ ಗುಂಡಿಗೆ ಬಿದ್ದು ಗಂಭೀರವಾಗಿ ಗಾಯಗೊಂಡು ಮೃತಪಟ್ಟ ವ್ಯಕ್ತಿ.

ಕೇರಳ ಮೂಲದ ಗಫೂರ್ ಎಂಬವರ ಮಾಲಕತ್ವ ಫಾಲ್ಕನ್ ಕಲ್ಲುಕ್ವಾರೆಯನ್ನು ವಿಸ್ತರಿಸುವ ಸಲುವಾಗಿ ಮೇಲ್ಭಾಗದಲ್ಲಿ ಸ್ವಚ್ಛಗೊಳಿಸುತ್ತಿದ್ದಾಗ ಹೊರರಾಜ್ಯದ ಕಾರ್ಮಿಕರೊಂದಿಗೆ ಆಗಮಿಸಿದ್ದ ಪ ಬಂಗಾಲ ಕಾರ್ಮಿಕ ಹಕೀಬುಲ್ಲಾ ಎಂಬವರು ಮಣ್ಣು, ಕಲ್ಲು ಸಮೇತ ಕ್ವಾರೆಗೆ ಬಿದ್ದಿದ್ದು, ಎರಡು ಕಾಲುಗಳಿಗೆ ಗಂಭೀರ ಹಾನಿಯಾಗಿತ್ತು. ಇವರನ್ನು ತಕ್ಷಣ ಮಂಗಳೂರಿನ ತೇಜಸ್ವಿನಿ ಆಸ್ಪತ್ರೆಗೆ ಸಾಗಿಸಿದ್ದು, ಎರಡೂ ಕಾಲುಗಳನ್ನು ಕತ್ತರಿಸಿ ತೆಗೆದಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಮೃತಪಟ್ಟಿದ್ದಾರೆ.
ಇಂದು(ಫೆ20) ಬಂಗಾಲಕ್ಕೆ ಶವ ಸಾಗಿಸಲಿದ್ದಾರೆಂದು ತಿಳಿದುಬಂದಿದೆ. ಘಟನೆ ನಡೆದಾಗ ಬಜಪೆ ಠಾಣೆಯಲ್ಲಿ `ಅಜಾಗರೂಕತೆ’ ಎಂದು ಕ್ವಾರೆ ಮಾಲಕ ಗಫೂರ್, ಪಾಲುದಾರ ಮನೋಜ್, ಮ್ಯಾನೇಜರ್ ಕುಂಜ್ಞಿ ಮಾಲಕ ಗಫೂರ್, ಪಾಲುದಾರ ಮನೋಜ್, ಮ್ಯಾನೇಜರ್ ಕುಂಜ್ಞಿ ಮತ್ತಿತರರ ಮೇಲೆ ಪ್ರಕರಣ ದಾಖಲಾಗಿದ್ದರೂ ಇದೀಗ “ಮೃತ ಹಕೀಬುಲ್ಲಾ ಮತ್ತಿತರರ ಮೇಲೆ ಪ್ರಕರಣ ದಾಖಲಾಗಿದ್ದರೂ ಇದೀಗ `ಮೃತ ಹಕೀಬುಲ್ಲಾ ಕ್ವಾರೆ ಕಾರ್ಮಿಕನೇ ಅಲ್ಲ. ಕ್ವಾರೆ ನೋಡಲು ಬಂದಾಗ ಆಯತಪ್ಪಿ ಬಿದ್ದಿದ್ದಾನೆ. ಕ್ವಾರೆಯಲ್ಲಿ ಕಾರ್ಮಿಕರಿಗೆ ರಕ್ಷಣೆ ಸೂಕ್ತವಾಗಿದೆ” ಎಂದು ಇಡೀ ಪ್ರಕರಣವನ್ನು ಎಂದು ಇಡೀ ಪ್ರಕರಣವನ್ನು ತಿರುಚಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಇದಕ್ಕಾಗಿ ಈತನ ಜೊತೆ ಕಾರ್ಮಿಕರಿಗೆ ಮತ್ತು ಕುಟುಂಬಿಕರಿಗೆ ವಿವಿಧ ಆಮಿಷವೊಡ್ಡಲಾಗಿದೆ ಎಂದು ಹೇಳಲಾಗುತ್ತಿದೆ. ಇದಲ್ಲದೆ ಈ ಕ್ವಾರೆಯ ಸ್ಫೋಟದಿಂದ ಸ್ಥಳೀಯರು ಭಯಪಡುವ ಪರಿಸ್ಥಿತಿಯಿದ್ದು, ಕಲ್ಲುಗಳು ರಸ್ತೆಗೆ ಚಿಮ್ಮುತ್ತಿದ್ದರೂ ಪಂಚಾಯತ್ ಪರವಾನಿಗೆ ನೀಡಿದ್ದು, ಪರವಾನಿಗೆ ರದ್ದುಗೊಳಿಸಬೇಕೆಂಬ ಒತ್ತಾಯ ಕೇಳಿಬಂದಿದೆ.

