ಸುದ್ದಿ9 ಕಿನ್ನಿಗೋಳಿ
ಭಾವನಾತ್ಮಕತೆ-ಧಾರ್ಮಿಕತೆ ಬೆಲೆ ಕಳೆದುಕೊಳ್ಳುವ ಈ ಆಧುನಿಕ ಯುಗದಲ್ಲಿ ನಮ್ಮ ಮಕ್ಕಳಿಗೆ ಶಿಸ್ತು ಬದ್ದ ಜೀವನ ಕಲ್ಪಿಸಿ ಸಂಸ್ಕಾರಯುತ ಶಿಕ್ಷಣ ನೀಡಿ ಉತ್ತಮ ನಾಗರೀಕನಾಗಿ ರೂಪಿಸುವಲ್ಲಿ ಕಾರ್ಯಪ್ರವತ್ತರಾಗಬೇಕು ಎಂದು ಧರ್ಮದಶರ್ಿ ಹರಿಕೃಷ್ಣ ಪುನರೂರು ಹೇಳಿದರು.
ಪುನರೂರು ಶ್ರೀ ಗುರುಬ್ರಹ್ಮ ಭಜನಾ ಮಂಡಳಿ ಇದರ 25 ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಶ್ರೀ ಶನೀಶ್ವರ ಪೂಜೆ, ವಾರ್ಷಿಕ ಭಜನಾ ಮಂಗಲೋತ್ಸವದ ಅಂಗವಾಗಿ ಶನಿವಾರ ನಡೆದ ಧಾರ್ಮಿಕ16KinniBhajane ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೊಲೆಕಾಡಿ ವಾದಿರಾಜ ಉಪಾಧ್ಯಾಯ ಕಾರ್ಯಕ್ರಮ ಉದ್ಘಾಟಿಸಿ ಧಾರ್ಮಿಕ ಪ್ರವಚನ ನೀಡಿದರು.

ಯುಗಪುರುಷದ ಭುವನಾಭಿರಾಮ ಉಡುಪ, ಉದ್ಯಮಿ ಪಟೇಲ್ ವಾಸುದೇವ ರಾವ್, ಕಿನ್ನಿಗೋಳಿ ಪಂಚಾಯಿತಿ ಮಾಜಿ ಅಧ್ಯಕ್ಷ ದೇವಪ್ರಸಾದ್ ಪುನರೂರು, ಜಿ. ಪಂ. ಸದಸ್ಯರಾದ ಆಶಾಲತಾ ಆರ್. ಸುವರ್ಣ, ಈಶ್ವರ್ ಕಟೀಲ್, ಉದ್ಯಮಿಗಳಾದ ಜೋಸ್ಸಿ ಪಿಂಟೋ, ಪುರಂದರ ಡಿ. ಶೆಟ್ಟಿಗಾರ್, ಧನಂಜಯ ಶೆಟ್ಟಿಗಾರ್, ಗ್ರಾ. ಪಂ. ಸದಸ್ಯರಾದ ರಘುರಾಮ್ ಪುನರೂರು, ಮಾಧವ ಬಂಗೇರ, ಪುನರೂರು ಶ್ರೀ ಗುರುಬ್ರಹ್ಮ ಭಜನಾ ಮಂಡಳಿ ಅಧ್ಯಕ್ಷ ರಮೇಶ್ ಸಾಲ್ಯಾನ್ ಉಪಸ್ಥಿತರಿದ್ದರು.
ತುಕರಾಮ ಶೆಟ್ಟಿಗಾರ್ ವರದಿ ವಾಚಿಸಿದರು. ಸತೀಶ್ ಹಾಗೂ ಪ್ರದೀಪ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *