ಸುದ್ದಿ9 ಕಿನ್ನಿಗೋಳಿ
ಕರ್ನಾಟಕ ಪ್ರದೇಶ ಕಾಂಗ್ರೆಸ್ ಆಶ್ರಯದಲ್ಲಿ ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಸಂಯೋಜನೆಯಲ್ಲಿ ಸಚಿವ ಕೆ.ಅಭಯಚಂದ್ರ ಜೈನ್ ಉಪಸ್ಥಿತಿಯಲ್ಲಿ ಮೂಲ್ಕಿ ಮೂಡಬಿದ್ರೆ ವಿಧಾನ ಸಭಾ ಕ್ಷೇತ್ರದ ಕಿನ್ನಿಗೋಳಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಪಾದಯಾತ್ರೆಯು ನಡೆಯಿತು.
ಕಿನ್ನಿಗೋಳಿ ವಸಂತ ಮಂಟಪದಿಂದ ಕಿನ್ನಿಗೋಳಿ ಚರ್ಚೆ ಮುಂಭಾಗದವರೆಗೆ ರಸ್ತೆಯಲ್ಲಿ ಪಾದಯಾತ್ರೆ ನಡೆಯಿತು.
ಮುಲ್ಕಿ ಮೂಡಬಿದ್ರಿ ಶಾಸಕ ಸಚಿವ ಅಭಯಚಂದ್ರ ಜೈನ್ ಹೊರತುಪಡಿಸಿ ಮಂಗಳೂರು ಲೋಕಸಭಾ ಅಭ್ಯರ್ಥಿ ಬಿ ಜನಾರ್ಧನ ಪೂಜಾರಿ ಸಹಿತ ಪ್ರಮುಖ ಜಿಲ್ಲಾ ಕಾಂಗ್ರೆಸ್ ನಾಯಕರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು.
ಮೂಲ್ಕಿ ಬ್ಲಾಕ್ ಅಧ್ಯಕ್ಷ ಪ್ಯಯೊಟ್ಟು ಸದಾಶಿವ ಸಾಲ್ಯಾನ್, ರಾಜು ಕುಂದರ್, ಪ್ರಮೋದ್ ಕುಮಾರ್, ಶ್ಯಾಮಲಾ ಪಿ.ಹೆಗ್ಡೆ, ಶೈಲಾ ಸಿಕ್ವೇರಾ, ಗುಣಪಾಲ ಶೆಟ್ಟಿ, ಶಶಿಕಾಂತ ಶೆಟ್ಟಿ, ವಿಮಲಾ ಪೂಜಾರಿ, ಮೈಯದ್ದಿ, ರಿಚರ್ಡ್ ಡಿಸೋಜಾ, ಜೊಸ್ಸಿ ಪಿಂಟೋ, ಶಾಲೆಟ್ ಪಿಂಟೋ, ಅನಿತಾ, ಸೆವೆರಿನ್ ಲೋಬೋ, ಡೊಲ್ಪಿ ಸಂತುಮಯೋರ್, ಪ್ರಕಾಶ್ ಆಚಾರ್, ಕಿನ್ನಿಗೋಳಿ ವಲಯ ಕಾಂಗ್ರೇಸಿನ ನಾಯಕರು ಹಾಗೂ ಕಾರ್ಯಕರ್ತರು ಪಾದಯಾತ್ರೆಯಲ್ಲಿ ಭಾಗವಹಿಸಿದರು
