ಉಳ್ಳಾಲ: ಮದರಸದಲ್ಲಿ ಧ್ವನಿವರ್ಧಕ ಬಳಸುತ್ತಿರುವುದನ್ನು ವಿರೋಧಿಸಿದ ಮಹಿಳೆಯರಿಗೆ ಮದರಸ ಸಮಿತಿ ಅಧ್ಯಕ್ಷ ಸೇರಿ 21 ಮಂದಿಯ ತಂಡ ಹಲ್ಲೆ ನಡೆಸಿ ಜೀವಬೆದರಿಕೆಯೊಡ್ಡಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಸುಭಾಷನಗರದಲ್ಲಿ ಶನಿವಾರ ತಡರಾತ್ರಿ ವೇಳೆ ನಡೆದಿದ್ದು, ಘಟನೆಗೆ ಪ್ರತೀಕಾರವಾಗಿ ಅದೇ ಸ್ಥಳದಲ್ಲಿ ಇನ್ನೊಂದು ತಂಡ ಮತ್ತೊಂದು ಮಹಿಳೆಗೆ ಹಲ್ಲೆ ನಡೆಸಿದೆ. ಘಟನೆಗೆ ಸಂಬಂಧಿಸಿ ಮೂವರು ಮಹಿಳೆಯರು ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 28 ಮಂದಿ ವಿರುದ್ಧ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

9

7

1 (3)

3
ಘಟನೆ ಸಾರಾಂಶ: ಶನಿವಾರ ರಾತ್ರಿ 8.30ರ ಸುಮಾರಿಗೆ ಸುಭಾಷನಗರದಲ್ಲಿರುವ ಅಂಜುಮಾನ್ ಮಬ್ಲಗುಲ್ ಅಲಹಾ ಮದರಸದಲ್ಲಿ ಅನಧಿಕೃತವಾಗಿ ಧ್ವನಿವರ್ಧಕ ಬಳಸುತ್ತಿರುವುದನ್ನು ವಿರೋಧಿಸಿ ಹಾಗೂ ಮದರಸ ಸಮೀಪ ರಾತ್ರಿ ವೇಳೆ ಗುಂಪು ಕಟ್ಟಿ ದಾರಿಯಲ್ಲಿ ಹೋಗುವವರಿಗೆ ತೊಂದರೆ ನೀಡುವುದನ್ನು ನಿಲ್ಲಿಸುವಂತೆ ಮನವಿ ಮಾಡಲು ಸ್ಥಳೀಯ ನಿವಾಸಿಗಳಾದ ಬೇಬಿ, ಕಿಶೋರಿ, ಗೀತಾ, ಶಶಿಕಲಾ ನಾಯ್ಕ್ ಅವರು ಮದರಸ ಸಮಿತಿ ಅಧ್ಯಕ್ಷ ಹಮೀದ್ ಅವರ ಮನೆಗೆ ತೆರಳಿದ್ದರು. ಅಲ್ಲಿ ಅತಿರೇಕವಾಗಿ ವತರ್ಿಸಿದ ಮದರಸ ಅಧ್ಯಕ್ಷ ಹಮೀದ್ `ಮುಂದೆಯೂ ಧ್ವನಿವರ್ಧಕ ಬಳಸುತ್ತೇವೆ ಏನು ಮಾಡ್ತೀರಿ, ಕಾನೂನು ನನಗೂ ಗೊತ್ತಿದೆ’ ಎಂದು ಏರುದನಿಯಲ್ಲಿ ಉತ್ತರಿಸಿ, ಮನೆಯಿಂದ ತೆರಳದೇ ಇದ್ದಲ್ಲಿ ಹೊಡೆಯುವ ಬೆದರಿಕೆಯನ್ನು ಒಡ್ಡಿದ್ದರು. ಮತ್ತೆ ಅಲ್ಲಿಂದ ವಾಪಸ್ಸಾದ ಮಹಿಳೆಯರು ಮನೆಗೆ ಹೋಗುವ ದಾರಿಮಧ್ಯೆ ನೌಫಾಲ್ ಮತ್ತು ತಂಡ ಸೇರಿಕೊಂಡು ಮಹಿಳೆಯರ ಮೇಲೆ ಕೈಹಾಕಿ ಮಾನಹಾನಿ ಮಾಡಿರುವುದಲ್ಲದೆ, ಬೇಬಿ ಮತ್ತು ಗೀತಾ ಎಂಬವರಿಗೆ ಕಾಲಿನಿಂದ ಒದ್ದು ಹಲ್ಲೆ ನಡೆಸಿರುವ ಕುರಿತು ಅನಿತಾ ವೇಗಸ್ ಎಂಬವರು ಉಳ್ಳಾಲ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಹಲ್ಲೆಗೊಳಗಾದ ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಪಿಗಳಾದ ಹಮೀದ್, ರಹಿಮಾನ್, ನೌಫಾಲ್, ಸಲೀಂ, ಹಮೀದ್, ಮುಸ್ತಾಫ, ಆಸೀಫ್, ಹಕೀಂ, ಇಜಾಝ್, ಹನೀಫ್, ಉಸ್ಮಾನ್, ನೌಷಾದ್, ಹಂಝ, ಅಬ್ಬಾಸ್, ಬಶೀರ್, ಕರೀಂ, ಇಮ್ರಾನ್, ಮಜೀದ್, ಅಶ್ರಫ್, ಇಶಾಕ್, ಮಹಮ್ಮದ್ ಹನೀಫ್ ಎಂಬವರ ವಿರುದ್ಧ ಜೀವಬೆದರಿಕೆ, ಕೊಲೆಯತ್ನ, ಮಾನಭಂಗ ಯತ್ನ, ಜಾತಿ ನಿಂದನೆ ಸೆಕ್ಷನ್ ನಡಿ 506, 504, 143, 147, 149, 323, 324, 354 ಪ್ರಕರಣ ದಾಖಲಾಗಿದೆ.
ಪ್ರತಿದೂರು: ಸುಭಾಷನಗರ ನಿವಾಸಿ ನೌಷಾದ್ ಎಂಬವರು ಮಸೀದಿಯಲ್ಲಿ ನಮಾಜು ಮುಗಿಸಿ ಮನೆ ಕಡೆಗೆ ತೆರಳುತ್ತಿದ್ದಾಗ, ಆರು ಮಂದಿ ಯುವಕರ ತಂಡ ಸುಭಾಷನಗರ ನಿವಾಸಿ ಅಮೀನಮ್ಮ ಎಂಬವರನ್ನು ಎಳೆಯುತ್ತಿದ್ದರು. ಇದನ್ನು ಕಂಡು ಆರೋಪಿಗಳ ಕೃತ್ಯವನ್ನು ತಡೆಯಲು ಮುಂದಾದ ನೌಷಾದ್ ಅವರಿಗೆ ತಂಡ ಹಲ್ಲೆ ನಡೆಸಿದೆ ಎಂದು ನೌಷಾದ್ ಉಳ್ಳಾಲ ಠಾಣೆಯಲ್ಲಿ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಅದರಂತೆ ಸುಭಾಷನಗರ ನಿವಾಸಿಗಳಾದ ಅನಿಲ್, ನಿತಿನ್, ಧನು, ಯತೀಶ್, ಪ್ರಶಾಂತ್, ಮಂಜುನಾಥ್ ಎಂಬವರ ವಿರುದ್ಧ ಸೆಕ್ಷನ್ 143, 147, 148 , 149, 323, 324, 354 ರಡಿ ಪ್ರಕರಣ ದಾಖಲಾಗಿದೆ.
ಘಟನಾ ಸ್ಥಳಕ್ಕೆ ಎಸಿಪಿ ಕಲ್ಯಾಣ್ ಶೆಟ್ಟಿ, ಡಿಸಿಪಿ ಕ್ರೈಂ ವಿಷ್ಣುವರ್ಧನ್, ಉಳ್ಳಾಲ ಠಾಣಾಧಿಕಾರಿ ಸವಿತ್ರತೇಜ ಹಾಗೂ ಎಸ್.ಐ ಭಾರತಿ ಸ್ಥಳಕ್ಕಾಗಮಿಸಿ , ಸ್ಥಳದಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಿ ಬಿಗಿ ಭದ್ರತೆ ಒದಗಿಸಿದ್ದಾರೆ.
ನ್ಯಾಯಾಲಯದಲ್ಲಿ ದಾವೆ : ಅಂಜುಮಾನ್ ಮಬ್ಲಗುಲ್ ಅಲಹಾ ಮದರಸ ಕುರಿತ ದಾವೆ ನ್ಯಾಯಾಲಯದಲ್ಲಿದೆ. ವಸತಿ ಪ್ರದೇಶದಲ್ಲಿನ ಖಾಲಿ ಜಾಗದಲ್ಲಿ ವಸತಿಯೇತರ ಸಂಘ-ಸಂಸ್ಥೆಗಳಿಗೆಂದು ಅಂದಿನ ಎ.ಸಿ ಆದೇಶ ಹೊರಡಿಸಿದ್ದರು. ಅದೇ ಜಾಗದಲ್ಲಿ ಮದರಸ ಕಟ್ಟಡವನ್ನು ನಿಮರ್ಿಸಲಾಗಿತ್ತು. ತದನಂತರ ಮಸೀದಿ ಚಟುವಟಿಕೆಗಳನ್ನು ನಡೆಸುತ್ತಿರುವುದನ್ನು ವಿರೋಧಿಸಿ ಸ್ಥಳೀಯರು ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ನ್ಯಾಯಾಲಯದಲ್ಲಿ ಮಸೀದಿ ಚಟುವಟಿಕೆ ನಡೆಸದಂತೆ ತಡೆಯಾಜ್ಞೆಯೂ ಬಂದಿತ್ತು. ಅದರ ನಡುವೆಯೂ ಮದರಸ ಕಟ್ಟಡವನ್ನು ತೆಗೆದು ನೂತನವಾಗಿ ಕಟ್ಟಡವನ್ನು ನಿಮರ್ಿಸಿ ಮಸೀದಿಯಲ್ಲಿರುವ ಸಲಕರಣೆಗಳನ್ನು ಇಡುವ ಸಂದರ್ಭ ಸ್ಥಳೀಯರು ವಿರೋಧ ವ್ಯಕ್ತಪಡಿಸಿ, ಬಳಿಕ ಪೊಲೀಸರ ಸಮ್ಮುಖದಲ್ಲಿ ಅದನ್ನು ತೆರವುಗೊಳಿಸಲಾಗಿತ್ತು. ನಂತರವೂ ನ್ಯಾಯಾಲಯದ ತಡೆಯಾಜ್ಞೆ ಇದ್ದರೂ ರಾತ್ರಿ 8ರಿಂದ 11 ರವರೆಗೆ ಧ್ವನಿವರ್ಧಕಗಳನ್ನು ಬಳಕೆ ಮಾಡಿ ವಸತಿ ಪ್ರದೇಶದಲ್ಲಿ ತೊಂದರೆ ನೀಡುತ್ತಿದ್ದಾರೆಂದು ಸ್ಥಳೀಯರು ಆರೋಪಿಸಿದ್ದಾರೆ.

By Suddi9

Leave a Reply

Your email address will not be published. Required fields are marked *