ಸುದ್ದಿ9 ಕೈಕಂಬ: ಶ್ರೀ ಕಾವೇಶ್ವರ ಭಜನಾ ಮಂಡಳಿ ತೆಂಕಬೆಳ್ಳೂರು ಇದರ 9ನೇ ವರ್ಷದ ವಾರ್ಷಿಕೋತ್ಸವ ಫೆ.17ರಂದು ಮಂಗಳವಾರ ಶ್ರೀ ಕಾವೇಶ್ವರ ದೇವರ ದಿವ್ಯ ಸನ್ನಿಧಿಯಲ್ಲಿ ಮಹಾಶಿವರಾತ್ರಿ ಉತ್ಸವ ಜರಗಲಿದೆ. ದೇವರಿಗೆ ನಾನಾ ಪೂಜಾ ವಿಧಿವಿಧಾನಗಳು ಬಿಲ್ವಾರ್ಚನೆ ಪೂಜೆ, ಸರ್ವಾಲಂಕಾರ ಪೂಜೆ ಇತ್ಯಾದಿ ಪೂಜೆಗಳು ನಡೆಯಲಿದೆ.

ಬೆಳಿಗ್ಗೆ 6.20ರಿಂದ ರಾತ್ರಿ 7.30ರವರೆಗೆ ವಿವಧ ಭಜನಾ ಮಂಡಳಿಯವರಿಂದ ಭಜನಾ ಸಂಕೀರ್ತನೆ ನಡೆಯಲಿದೆ.
ದೀಪ ಬೆಳಗಿಸುವಿಕೆ ಪ್ರಧಾನ ಅರ್ಚಕರಾದ ಪ್ರಕಾಶ್ ಭಟ್,ರಘುರಾಮ್ ಭಟ್, ದೇವಳದ ಆಡಳಿತ ಮೊಕ್ತೇಸರ ರಘು ಎಲ್ ಶೆಟ್ಟಿ, ಅನಂತರಾಮ್ ಹೇರಳ,ಚಂದ್ರಶೇಖರ ಅಜಿಲ ದೀಪ ಪ್ರಜ್ವಲನಗೊಳ್ಳಲಿದೆ. ರಾತ್ರಿ 9.30ರಿಂದ ಬಪ್ಪನಾಡು ಶ್ರೀ ದುಗರ್ಾಪರಮೇಶ್ವರೀ ಯಕ್ಷಗಾನ ಮಂಡಳಿಯವರಿಂದ ಕೋರ್ದಬ್ಬು ತನ್ನಿಮಾನಿಗ ಎಂಬ ಪೌರಾಣಿಕ ಯಕ್ಷಗಾನ ಬಯಲಾಟ ಜರಗಲಿರುವುದು.
