ಕೈಕಂಬ: ಗುರುಪುರ ವ್ಯವಸಾಯ ಸೇವಾ ಬ್ಯಾಂಕ್ನ ಇದರ ಆಡಳಿತ ಮಂಡಳಿಯ ನಿರ್ದೇಶಕರ ಸಾಮಾನ್ಯ ಚುನಾವಣೆ ಪ್ರಕ್ರಿಯೆ ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯೆ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿತ್ತು. ಈ ಚುನಾವಣೆ ಗುರುಪುರದ ಸತ್ಯದೇವತಾ ಸಭಾಗೃಹದಲ್ಲಿ ನಡೆಸಲಾಯಿತು. ಒಟ್ಟು 28 ಹುದ್ದೆಗಳಿಗೆ ಈ ಚುನಾವಣೆ ನಡೆದಿತ್ತು. ಬಿಜೆಪಿ 9, ಕಾಂಗ್ರೆಸ್ 9 ಸ್ಪರ್ಧಿಗಳನ್ನು ಕನಕ್ಕಿಳಿಸಿದ್ದು ಒಟ್ಟು 10 ಮಂದಿ ಪಕ್ಷೇತರರಾಗಿ ಸ್ಪರ್ಧಿಸಿದ್ದರು.

ಬಿಜೆಪಿ ಹಾಗೂ ಕಾಂಗ್ರೆಸ್ ಮಧ್ಯೆ ನೇರ ಹನಾಹಣಿ ಏರ್ಪಟ್ಟಿತ್ತಲ್ಲದೆ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿತ್ತು. ಸಾಮಾನ್ಯ, ಪರಿಷಿಷ್ಠ ಜಾತಿ, ಪ.ಪಂಗಡ, ಮಹಿಳೆಯರ ಮೀಸಲಿರಿಸಿದ ಸಾಲಗಾರ, ಸಾಲಗಾರರಲ್ಲದ ಮತಕ್ಷೇತ್ರದಲ್ಲಿ ಈ ಅಭ್ಯರ್ಥಿಗಳನ್ನು ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಪ್ರತ್ಯೇಕ ಪ್ರತ್ಯೇಕವಾಗಿ ಕಣಕ್ಕಿಳಿಸಿದ್ದವು. ನೂರಾರು ಮಂದಿ ಸರತಿ ಸಾಲಿನಲ್ಲಿ ನಿಂತು ತನ್ನ ಹಕ್ಕನ್ನು ಚಲಾಯಿಸಿದರು. ಮತದಾನ ಪ್ರಕ್ರಿಯೆ ಗೌಪ್ಯವಾಗಿ ನಡೆಸಲಾಯಿತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಸ್ಥಳದಲ್ಲೇ ಬೀಡುಬಿಟ್ಟಿತ್ತು ಪಹರೆ ಕಾಯುತ್ತಿದ್ದರು. ಇದರ ಚುನಾವಣೆಯ ಮತ ಎಣಿಕೆ ಕಾರ್ಯ ಶನಿವಾರ ಸಂಜೆ ನಡೆಯಲಿದೆ. ಪಕ್ಷೇತರ ಅಅಭ್ಯರ್ಥಿಗಳು ಸ್ಫರ್ಧಿಸಿರುವುದರಿಂದ ಈ ಚುನಾವಣೆ ವ್ಯಾಪಕ ಕುತೂಲಕ್ಕೆ ಕಾರಣವಾಗಿದೆ. ಚುನಾವಣೆಯ ಕಾರಣದಿಂದ ಗುರುಪುರ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡೆ ತಡೆಗಳು ಆಗುತ್ತಿತ್ತು.












