diesel-price

ಪೆಟ್ರೋಲ್ ದರ ಪ್ರತಿ ಲೀಟರಿಗೆ 2.42 ರೂಪಾಯಿ ಹಾಗೂ ಡೀಸೆಲ್ ಪ್ರತಿ ಲೀಟರಿಗೆ 2.25 ರೂಪಾಯಿಗಳಷ್ಟು ಮತ್ತೆ ಇಳಿಕೆ . ಇಂದು (03-Feb-2015) ಮಧ್ಯರಾತ್ರಿಯಿಂದಲೇ ನೂತನ ದರಗಳು ಜಾರಿ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರಗಳು ಕುಸಿತ ಮುಂದುವರಿದ ಬೆನ್ನಲ್ಲೆ ಸರ್ಕಾರಿ ಸ್ವಾಮ್ಯದ ತೈಲ ಕಂಪೆನಿಗಳು ಪೆಟ್ರೋಲ್ ಹಾಗೂ ಡೀಸೆಲ್ ದರ ಇಳಿಕೆಗೆ ನಿರ್ಧರಿಸಿವೆ.

ಕಳೆದ ಆಗಸ್ಟ್ ತಿಂಗಳನಿಂದ ಪೆಟ್ರೋಲ್ ದರ ಇಳಿಕೆಯಾಗುತ್ತಿರುವುದು ಇದು ಸತತ ಹತ್ತನೇ ಬಾರಿ. ಕಳೆದ ಅಕ್ಟೋಬರ್ ನಿಂದ ಡೀಸೆಲ್ ದರ ಆರು ಬಾರಿ ಇಳಿಕೆಯಾಗಿದೆ.

ಸಾಮಾನ್ಯವಾಗಿ ತಿಂಗಳಿನ 1ನೇ ಹಾಗೂ 15ನೇ ತಾರೀಖಿಗೆ ತೈಲಬೆಲೆಗಳ ದರಗಳನ್ನು ಪರಿಷ್ಕರಿಸಲಾಗುತ್ತದೆ. ಆದರೆ ದೆಹಲಿ ವಿಧಾನಸಭೆ ಚುನಾವಣೆಗೆ ದಿನಗಣನೆ ಶುರುವಾದ ಸಮಯದಲ್ಲಿ ತೈಲದರಗಳು ಇಳಿಕೆಯಾಗಿವೆ.

By Suddi9 Author

Suddi9

Leave a Reply

Your email address will not be published. Required fields are marked *