ನವದೆಹಲಿ: ಘರ್ ವಾಪಸಿಯ ಮುಂದುವರಿದ ಭಾಗದಂತೆ ಬೇರೆ ಧರ್ಮದ ಯುವತಿಯರನ್ನು ಪ್ರೀತಿಸಿದ ಹಿಂದೂ ಯುವಕರು ಮದುವೆಯಾಗುವ ಸಲುವಾಗಿ ಫೆ.14ರ ಪ್ರೇಮಿಗಳ ದಿನಾಚರಣೆಯನ್ನು `ಪ್ರೇಮ ವಿವಾಹ ದಿನ’ವನ್ನಾಗಿ ಆಚರಿಸಲು ಹಿಂದೂ ಮಹಾ ಸಭ ಸಿದ್ದತೆ ನಡೆಸುತ್ತಿದೆ ಎಂಬ ಅಂಶ ಮೂಲಗಳಿಂದ ಲಭ್ಯವಾಗಿದ್ದು, ಈ ಬಗ್ಗೆ ದೃಢೀಕರಣಗೊಂಡಿಲ್ಲ.

ಅಂತರ್ ಧರ್ಮೀಯ ಯುವತಿಯರನ್ನು ಪ್ರೀತಿಸಿ ಮದುವೆಯಾಗಲು ಇಚ್ಛಿಸುವ ಹಿಂದೂ ಯುವಕರಿಗೆ ಮಂಟಪ ಸಿದ್ಧಪಡಿಸಿದ ಹಿಂದೂ ಮಹಾಸಭಾ ತನ್ನ ಕಚೇರಿಯಲ್ಲಿ ವಿವಾಹ ಮಾಡಬಹುದೆಂದು ಹೇಳಿಕೊಂಡಿದೆ. ಆದರೆ ಮದುವೆಯಾಗಲು ಇಚ್ಛಿಸುವ ಯುವತಿಯರು ಹಿಂದೂ ಧರ್ಮವನ್ನು ಸ್ವೀಕರಿಸುವಂತೆ ಷರತ್ತು ವಿಧಿಸಿದೆ. ಮದುವೆಯಾಗುವವರು ಸಂಘಟನೆಯ ಗಮಕ್ಕೆ ತರವಂತೆ ತಿಳಿಸಿದ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ಚಂದ್ರ ಪ್ರಕಾಶ್ ಕೌಷಿಕ್ ಜೋಡಿಗೆ ಮದುವೆ ಮಾಡುವ ಒಂದು ಗಂಟೆಯ ಮುಂಚೆ ಯುವತಿಯನ್ನು ಮತಾಂತರ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
