ಮಲೇಷ್ಯಾ: ಶನಿವಾರ ಮುಂಜಾನೆ ಇದ್ದಕ್ಕಿದ್ದಂತೆ ಬಾನಂಗಳದಿಂದ ಕಣ್ಮರೆಯಾಗಿದ್ದ ಮಲೇಷ್ಯಾ ಏರ್ಲೈನ್ಸ್ ವಿಮಾನದ ಒಂದು ಬಾಗಿಲು ಪತ್ತೆಯಾಗಿರುವ ಬಗ್ಗೆ ರಕ್ಷಣಾ ತಂಡ ಮಾಹಿತಿ ನೀಡಿದೆ. ಸಾಗರದಲ್ಲಿ ಹುಡುಕಾಟ ನಡೆಸುತ್ತಿರುವ ಮಲೇಷ್ಯಾದ ನೌಕಾಪಡೆಗೆ ವಸ್ತುವೊಂದು ಗೋಚರವಾಗಿದ್ದು ಅದು ಮಾಯವಾದ ವಿಮಾನದ ಬಾಗಿಲಾಗಿರಬಹುದು ಎಂದು ಅಂದಾಜಿಸಲಾಗಿದೆ. ಇದರೊಂದಿಗೆ ವಿಮಾನವು ಆಕಾಶ ಮಾರ್ಗದಲ್ಲಿ ಪತನವಾಗಿರುವ ಶಂಕೆ ದಟ್ಟವಾಗುತ್ತಿದೆ. ಆರು ದೇಶಗಳ 20 ವಿಮಾನಗಳು ಮತ್ತು 40 ನೌಕೆಗಳು ಕಣ್ಮರೆಯಾದ ವಿಮಾನದ ಶೋಧಕಾರ್ಯದಲ್ಲಿ ತೊಡಗಿವೆ. ಆದರೆ ಇದುವರೆಗೂ ವಿಮಾನದ ಬಗ್ಗೆ ಯಾವುದೇ ಸುಳಿವು ಲಭ್ಯವಾಗಿಲ್ಲ. ಅನಾಮಧೇಯ ಅಧಿಕಾರಿಯೊಬ್ಬರ ಪ್ರಕಾರ ವಿಮಾನವು 35 ಸಾವಿರ ಅಡಿ ಎತ್ತರದಲ್ಲಿ ಛಿದ್ರಗೊಂಡು ಧ್ವಂಸವಾಗಿರುವ ಅನುಮಾನವಿದೆ.

malaysian plane vanished
malaysian plane vanished

plane

ಇಷ್ಟರವರೆಗೆ ವಿಮಾನದ ಪಳೆಯುಳಿಕೆಗಳು ಪತ್ತೆಯಾಗದಿರುವುದರಿಂದ ಈ ಸಂಶಯ ದೃಢವಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ನತದೃಷ್ಟ ವಿಮಾನದಲ್ಲಿದ್ದ ಇಬ್ಬರು ಪ್ರಯಾಣಿಕರು ನಕಲಿ ಪಾಸ್ ಪೋರ್ಟ್ ಬಳಸಿ ಪ್ರಯಾಣಿಸುತ್ತಿದ್ದರು. ಹಾಗಾಗಿ ಭಯೋತ್ಪಾದನಾ ಕೃತ್ಯದ ಬಗ್ಗೆಯೂ ಶಂಕೆ ವ್ಯಕ್ತಪಡಿಸಲಾಗುತ್ತಿದೆ. ಇಂಟರ್ಪೋಲ್ ಈ ಹಿಂದೆಯೇ ಕೆಲವರು ನಕಲಿ ಪಾಸ್ ಪೋರ್ಟ್ ಮೂಲಕ ವಿಮಾನದಲ್ಲಿ ಪ್ರಯಾಣಿಸುವ ಮಾಹಿತಿಯಿದೆ ಎಂದು ಎಲ್ಲಾ ದೇಶಗಳಿಗೆ ಸೂಚನೆ ನೀಡಿತ್ತು. ಆದರೆ ಯಾವ ದೇಶವೂ ಗಂಭೀರವಾಗಿ ಕಳವಾದ ಪಾಸ್ ಪೋರ್ಟ್ ಬಗ್ಗೆ ತಲೆಕೆಡಿಸಿಕೊಳ್ಳದ ಕಾರಣ ಇಂದು ಈ ದಿನ ನೋಡಬೇಕಾಗಿದೆ. ಇನ್ನು ಮುಂದಾದರೂ ಅಧಿಕಾರಿಗಳು ಈ ಘಟನೆಯಿಂದ ಪಾಠ ಕಲಿಯಬಹುದು ಎಂಬ ಮಾತನ್ನು ಇಂಟರ್ಪೋಲ್ ಅಧಕಾರಿಗಳು ಹೇಳಿದ್ದಾರೆ.

By suddi9

Leave a Reply

Your email address will not be published. Required fields are marked *