ಅಸ್ಸಾಂ : ದೇಶಾದ್ಯಂತ ಸಂಭ್ರಮದ ಗಣರಾಜ್ಯೋತ್ಸವ ಆಚರಣೆ ನಡೆದಿದ್ದರೆ ಅಸ್ಸಾಂ ನಲ್ಲಿ ಬಾಂಬ್ ಸ್ಪೋಟಗೊಂಡಿರುವ ವರದಿಯಾಗಿದೆ.

assam-blast1

ಅಸ್ಸಾಂ ನ ತೀನ್ ಸುಖಿ ಜಿಲ್ಲೆಯ ದಿಗ್ಬೊಯಿಯಲ್ಲಿ 2 ಬಾಂಬ್‌ಗಳು ಸ್ಫೋಟಿಸಲಾಗಿದೆ. ಎರಡೂ ಬಾಂಬ್‌ಗಳೂ ಕಡಿಮೆ ತೀವ್ರತೆಯಿಂದ ಕೂಡಿದ್ದು, ಇದುವರೆಗೆ ಯಾವುದೇ ಸಾವುನೋವಿನ ಬಗ್ಗೆ ವರದಿ ಬಂದಿಲ್ಲ.

ರೈಲು ಹಳಿಯ ಬಳಿ ಸುರಿದಿದ್ದ ಕಸದ ರಾಶಿಯಲ್ಲಿ ಒಂದು ಹಾಗೂ ಅಲ್ಲಿಗೆ ಸಮೀಪದ ಚರಂಡಿಯಲ್ಲಿ ಇನ್ನೊಂದು ಬಾಂಬ್ ಸ್ಫೋಟಗೊಂಡಿವೆ. ಈ ಎರಡೂ ಬಾಂಬ್‌ ಗಳೂ ಕೈಯಿಂದ ತಯಾರಿಸಲ್ಪಟ್ಟಿದ್ದು ಕಡಿಮೆ ಅಪಾಯದವಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಸಂಭವಿಸಿದ ಬಳಿಕ ಅಸ್ಸಾಂ ನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಭಾರತಕ್ಕೆ ಆಗಮಿಸಿದ್ದು ಗಣರಾಜ್ಯೋತ್ಸವ ದಿನಾಚರಣೆಯಂದು ದೇಶದ ವಿವಿಧ ಭಾಗಗಳಲ್ಲಿ ಉಗ್ರರು ಬಾಂಬ್ ಸ್ಪೋಟಿಸುವ ಸಾಧ್ಯತೆ ಬಗ್ಗೆ ಈ ಹಿಂದೆ ಗುಪ್ತಚರ ಇಲಾಖೆ ವರದಿ ನೀಡಿತ್ತು.

By suddi9

Leave a Reply

Your email address will not be published. Required fields are marked *