Modi - Obama
Modi – Obama

ONE

U.S. President Obama talks with India's Prime Minister Modi as he arrives at Air Force Station Palam in New Delhi

U.S. President Barack Obama hugs India's Prime Minister Narendra Modi as he arrives at Air Force Station Palam in New Delhi

U.S. President Obama is greeted by India's Prime Minister Modi as he arrives at Air Force Station Palam, New Delhi

Barack Obama, Narendra Modi

ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಮೂರು ದಿನಗಳ ಭೇಟಿಗೆ ಭಾನುವಾರ ನವದೆಹಲಿಗೆ ಬಂದಿಳಿದರು. ಇಲ್ಲಿನ ಪಾಲಂ ವಿಮಾನ ನಿಲ್ದಾಣಕ್ಕೆ ಬಂದಿಳಿದ ಒಬಾಮಾ ಅವರೊಂದಿಗೆ ಪತ್ನಿ ಮಿಷೆಲ್ ಒಬಾಮ ಹಾಗೂ ಉನ್ನತ ಮಟ್ಟದ ನಿಯೋಗವೂ ಇದೆ.

ಏರ್ ಫೋರ್ಸ್ ಒನ್ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಒಬಾಮ ಅವರನ್ನು ಶಿಷ್ಟಾಚಾರ ಬದಿಗೊತ್ತಿ ಪ್ರಧಾನಿ ನರೇಂದ್ರ ಮೋದಿ ಅವರು ಅದ್ಧೂರಿಯಾಗಿ ಬರಮಾಡಿಕೊಂಡರು. ನೆಹರೂ ಜಾಕೇಟ್ ಮೇಲೆ ಕೆಂಪು ಬಣ್ಣದ ಶಾಲು ಹೊದೆದಿದ್ದ ಪ್ರಧಾನಿ ಮೋದಿ ಮತ್ತು ಕಪ್ಪು ಬಣ್ಣದ ಸೂಟ್ ನಲ್ಲಿದ್ದ ಒಬಾಮ ಅವರು ಪರಸ್ಪರ ಆಲಿಂಗಿಸಿಕೊಂಡು ಆತ್ಮೀಯತೆಯನ್ನು ಮೆರೆದರು.

ಉಭಯ ಮೋದಿ ಹಾಗೂ ಒಬಾಮ ಅವರು ಹಲವು ಪ್ರಮುಖ ವಿಷಯಗಳಿಗೆ ಸಂಬಂಧಿಸಿದಂತೆ ದ್ವಿಪಕ್ಷೀಯ ಮಾತುಕತೆ ನಡೆಸುವ ನಿರೀಕ್ಷೆಗಳಿವೆ. ಇಂದು ಒಂದೇ ದಿನ ಒಬಾಮ ಅವರ ಏಳು ಕಾರ್ಯಕ್ರಮಗಳ ನಿಗದಿಯಾಗಿವೆ.

ಅಂದಹಾಗೆ ಗಣರಾಜೋತ್ಸವದಲ್ಲಿ ಅತಿಥಿಯಾಗಿ ಪಾಲ್ಗೊಳ್ಳಲಿರುವ ಅಮೆರಿಕದ ಮೊದಲ ಅಧ್ಯಕ್ಷ ಎಂಬ ಹೆಗ್ಗಳಿಕೆಗೆ ಒಬಾಮ ಪಾತ್ರರಾಗಲಿದ್ದಾರೆ. ಐದು ವರ್ಷಗಳ ಅವಧಿಯಲ್ಲಿ ಒಬಾಮ ಅವರ ಎರಡನೇ ಭೇಟಿ ಇದಾಗಿದೆ.

ಗಣರಾಜ್ಯೋತ್ಸವದ ಅತಿಥಿಯಾಗಿ ಭಾರತಕ್ಕೆ ಬಂದಿರುವ ಅಮೆರಿಕದ ಅಧ್ಯಕ್ಷ ಬರಾಕ್‌ ಒಬಾಮ ಅವರು ರಾಷ್ಟ್ರಪತಿ ಭವನದಲ್ಲಿ ಗೌರವ ವಂದನೆ ಸ್ವೀಕರಿಸಿದರು.

ಐಟಿಸಿ ಮೌರ್ಯ ಹೋಟೆಲ್‌ನಿಂದ ಹೊರಟು ಮಧ್ಯಾಹ್ನ 12.25ಕ್ಕೆ ರಾಷ್ಟ್ರಪತಿ ಭವನಕ್ಕೆ ಬಂದ ಒಬಾಮ ಅವರಿದ್ದ ‘ದಿ ಬೀಸ್ಟ್‌’ ಕಾರನ್ನು ಅಶ್ವದಳದ ಗೌರವ ರಕ್ಷೆಯಲ್ಲಿ ಬರಮಾಡಿಕೊಳ್ಳಲಾಯಿತು.

ಅಮೆರಿಕದ ಪ್ರಥಮಪ್ರಜೆ ಒಬಾಮ ಅವರನ್ನು ಭಾರತದ ಪ್ರಥಮಪ್ರಜೆ ಪ್ರಣವ್‌ ಮುಖರ್ಜಿ ಆತ್ಮೀಯವಾಗಿ ಸ್ವಾಗತಿಸಿದರು. ‘ದಿ ಬೀಸ್ಟ್’ನಿಂದ ಇಳಿದ ಒಬಾಮ ನಗುಮೊಗದೊಂದಿಗೆ ಪ್ರಣವ್‌ ಮುಖರ್ಜಿ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕೈ ಕುಲುಕಿದರು

By Suddi9 Author

Suddi9

Leave a Reply

Your email address will not be published. Required fields are marked *