ಸುದ್ದಿ9 ಕೈಕಂಬ: ಸೋಮನಾಥೇಶ್ವರ ಗುಹಾಲಯ ಶ್ರೀಕ್ಷೇತ್ರ ನೆಲ್ಲಿತೀರ್ಥ ನೀರುಡೆ- ಕೊಂಪದವು ಇಲ್ಲಿ ಎಪ್ರಿಲ್ 6ರಂದು ಸೋಮನಾಥ ದೇವರಿಗೆ ಅಷ್ಠಬಂಧ ಬ್ರಹ್ಮಕಲಶೋತ್ಸವ ಹಾಗೂ ನಾಗಮಂಡಲೋತ್ಸವ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷ ಬಿ. ನಾಗರಾಜ ಶೆಟ್ಟ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ನಾಗಮಂಡಲೋತ್ಸವ ಸಗ್ರಿ ಗೋಪಾಲಕೃಷ್ಣ ಸಾಮಗ ನೇತೃತ್ವದಲ್ಲಿ ಹಾಗೂ ಮದ್ದೂರು ಶ್ರೀ ಕೃಷ್ಣಪ್ರಸಾದ್್ ವೈದ್ಯ ಮತ್ತು ಬಳಗದವರ ಸಹಯೋಗದಲ್ಲಿ ನಡೆಯಲಿದೆ. ಎ.1ರಿಂದ ಎ.9ರವರೆಗೆ ಧಾರ್ಮಿಕ , ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿದೆ ಎಂದು ಗೋಷ್ಠಿಯಲ್ಲಿ ತಿಳಿಸಿದ್ದಾರೆ. ಇದೇ ವೇಳೆ ,ನಾಗರಾಜ ಶೆಟ್ಟಿ, ಧರ್ಮದರ್ಶಿ ಹರಿಕೃಷ್ಣ ಪುನರೂರು, ಹಾಗೂ
ಭುನಾಭಿರಾಮ ಉಡುಪ,ಆಮಂತ್ರಣ ಪತ್ರ ಬಿಡುಗಡೆ ಮಾಡಿದರು.
ವಿಶೇಷ ಕಾರ್ಯಕ್ರಮಗಳು
ಎಪ್ರಿಲ್ 2: ಋತ್ವಿಜರ ಸ್ವಾಗತ, ಆಚರ್ಯಾದಿ ರಥ್ವಿಗ್ವರಣ, ಬ್ರಹ್ಮಕೂರ್ಚ ಹೋಮ ಅಗ್ನಿ ಜನನ, ವಾಸ್ತು ಹೋಮ
ಎಪ್ರಿಲ್ 3: ನವಗ್ರಹ ಶಾಂತಿ ಹೋಮ, ಮೃತ್ಯಂಜಯ ಹೋಮ ಪರಿವಾರ ದೈವಗಳ ಸನ್ನಿಧಿಯಲ್ಲಿ ರಾಕ್ಷೋಘ್ನಹೋಮ
ಎಪ್ರಿಲ್ 4: ಸೋಮನಾಥ ದೇವರಿಗೆ ಅಷ್ಠಬಂಧ ಪ್ರತಿಷ್ಠೆ, ಪರಿವಾರ ದೇವರುಗಳನ್ನು ಪ್ರತಿಷ್ಠೆ ಮಾಡಿ ಬ್ರಹ್ಮಕಲಾಶಾಭಿಷೇಕ, ಪ್ರಸನ್ನ ಪೂಜೆ, ಶಾಂತಿ ಹೋಮ, ಅನ್ನಸಂತರ್ಪಣೆ, ದಿಶಾ ಹೋಮ, ಬಲಿ ಉತ್ಸವ
ಎಪ್ರಿಲ್ 5: ಚಂಡಿಕಾಯಾಗ, ಶಾಂತಿ ಪ್ರಾಯಶ್ಚಿತ ಹೋಮ, ತತ್ವ ಹೋಮ, ಅನ್ನಸಂತಪ ನಡೆಯಲಿದೆ
ಎಪ್ರಿಲ್್ 6: ಪರಿವಾರ ಕಲಶ ಸಹಿತ ಸೋಮನಾಥ ದೇವರಿಗೆ ಬ್ರಹ್ಮಕಲಶಾಭಿಷೇಕ, ಹಾಗೂ ಸಂಜೆ ನಾಗಮಂಡಲ ವೈಭವೋತ್ಸವ
ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು ಜರಗಲಿದೆ.
ಪತ್ರಿಕಾ ಗೋಷ್ಠಿಯಲ್ಲಿ ಹರಿಕೃಷ್ಣ ಕೆ. ಭುವನಾಭಿರಾಮ ಉಡುಪ, ಹರಿಕೃಷ್ಣ ಪುನರೂರು, ಬಿ. ನಾಗರಾಜ ಶೆಟ್ಟ್ಇ, ಪಿ. ಸುಬ್ರಾಯ ಭಟ್್, ರಾಧಾಕೃಷ್ಣ ತಂತ್ರಿ ಎಡಪದವು, ಎನ್.ವಿ.ಜಿ.ಕೆ ಭಟ್್ ಬೆಂಗಳೂರು , ಸದಾಶಿವ ಶೆಟ್ಟ್ಇ ಮುರ, ಜಯಶಂಕರ ಶೆಟ್ಟಿ ಮರೋಳಿ, ರಮಾನಾಥ ಶೆಟ್ಟಿ ಪಡುಪೆರಾರ, ದಯಾನಂದ ಶೆಟ್ಟ್ಇ ಮೇಲಿನ ಕೈದುಮಾರ್್, ಆನಂದ ಕಾವ ಸಾಂತ್ರಬೈಲು ಉಪಸ್ಥಿತರಿದ್ದರು.







