mbd_march7_5 (8)

mbd_march7_5 (1)

mbd_march7_5 (3)

mbd_march7_5 (7)

ಸುದ್ದಿ9 ಮೂಡುಬಿದರೆ: ಇಲ್ಲಿನ ಮಾಸ್ತಿಕಟ್ಟೆ, ಪುತ್ತಿಗೆ ಪಂಚಾಯಿತಿ ವ್ಯಾಪ್ತಿಯಲ್ಲಿರುವ ವಿದ್ಯುತ್ ಟವರ್ಗಳ ಪರಿಸರದಲ್ಲಿ ಶುಕ್ರವಾರ ಅಪರಾಹ್ನದ ವೇಳೆಗೆ ಬೆಂಕಿ ಆಕಸ್ಮಿಕ ನಡೆದಿದ್ದು ಸಕಾಲಿಕ ಪರಿಹಾರ ಕಾರ್ಯದಿಂದಾಗಿ ಹೆಚ್ಚಿನ ಹಾನಿ ತಪ್ಪಿದಂತಾಗಿದೆ.

ತಾಕೋಡೆಯ ಹನ್ನೆರಡು ಕವಲು ಪರಿಸರದಲ್ಲಿರುವ ಸೋಹಂ ಹೈಡ್ರೋ ಪವರ್ ಸ್ಟೇಶನ್ಗೆ ಸೇರಿದ ಹೈಟೆನ್ಶನ್ ತಂತಿಗಳು ಹಾದು ಹೋಗುವ ಟವರ್ಗಳ ಅಡಿ ಭಾಗದಲ್ಲಿ ಈ ಬೆಂಕಿ ಆಕಸ್ಮಿಕ ಸಂಭವಿಸಿದೆ. ಗುಡ್ಡಗಾಡು ಪರಿಸರದ ಒಣ ಹುಲ್ಲಿಗೆ ತಾಗಿರುವ ಬೆಂಕಿ ಆಸುಪಾಸಿನ ಮನೆ ಕಟ್ಟಡಗಳಿಗೆ ಸೋಕುವ ಮುನ್ನವೇ ಸಾರ್ವಜನಿಕರು, ಅಗ್ನಿಶಾಮಕ ದಳದ ಸಿಬಂದಿಯವರು ಶ್ರಮವಹಿಸಿ ಬೆಂಕಿಯನ್ನು ಆರಿಸಿ ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ಯಶಸ್ಸು ಕಂಡಿದ್ದಾರೆ.

ಅಪರಾಹ್ನದ ವೇಳೆಗೆ ಈ ದುರ್ಘಟನೆ ಸಂಭವಿಸಿದ್ದು ಸಂಜೆಯವರೆಗೂ ಅಗ್ನಿಶಾಮಕ ದಳದವರು ವಿದ್ಯಾಗಿರಿ, ಹಂಡೇಲು, ಕಾಪಿಕಾಡು, ಹಂಸಗಿರಿ, ಚಿಕ್ಕಪಾಡಿ ಹೀಗೆ ವಿವಿದೆಡೆ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದರು. ಪರಿಸ್ಥಿತಿ ನಿಯಂತ್ರಣಕ್ಕೆ ಕಾರ್ಕಳದ ಅಗ್ನಿಶಾಮಕ ದಳದ ತಂಡವೂ ಭಾಗವಹಿಸಿತು.

ಹನ್ನೆರಡುಕವಲು ಜಲ ವಿದ್ಯುತ್ ಘಟಕದಿಂದ ಇರುವೈಲು, ಪುಚ್ಚಮೊಗರು, ಹೊಸಬೆಟ್ಟು, ತೋಡಾರು, ಪುತ್ತಿಗೆ ಹೀಗೆ ಐದು ಗ್ರಾಮಗಳ ವ್ಯಾಪ್ತಿಯಲ್ಲಿ ಹಾದು ಹೋಗುವ ಸೋಹಂ ಘಟಕದ ವಿದ್ಯುತ್ ತಂತಿಗಳು ಈ ಭಾಗದಲ್ಲಿ 52ಕ್ಕೂ ಹೆಚ್ಚಿನ ಟವರ್ ಹೊಂದಿವೆ. ಪುತ್ತಿಗೆಯ ಪಳಕಳದಲ್ಲಿರುವ ಸಬ್ ಸ್ಟೇಶನ್ಗೆ ಈ ಪವರ್ ಲಿಂಕ್ ನೀಡಲಾಗುತ್ತಿದೆ. ಕಳೆದ ಜನವರಿಯಿಂದಲೇ ಇಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತಗೊಂಡಿದೆ ಎಂದು ತಿಳಿದು ಬಂದಿದೆ. ತಾಂತ್ರಿಕ ದೋಷದಿಂದ ಈ ಬೆಂಕಿ ಆಕಸ್ಮಿಕ ನಡೆದಿದೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದ್ದರೂ ಕಂಪೆನಿ ಕಡೆಯವರು ಈವರೆಗೆ ಘಟನೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ ಎಂದಿದ್ದಾರೆ.
……………….
.

By suddi9

Leave a Reply

Your email address will not be published. Required fields are marked *