ಹೆತ್ತವರನ್ನು ನೋಯಿಸದೇ ಜೀವಿಸುವುದೇ ನಿಜವಾದ ಅಹಿಂಸಾ ಧರ್ಮ
ಸುದ್ದಿ9 ಮೂಡುಬಿದಿರೆ: ತಾವೇ ಕೆತ್ತಿರುವ ಮೂರ್ತಿಗಳು , ಕಟ್ಟಿ ಪೂಜಿಸುವ ಮಂದಿರ, ಮಸೀದಿ,ಚರ್ಚುಗಳ ಬಗ್ಗೆ ಪೂಜನೀಯ ಭಾವನೆ ಇರುವವರಿಗೆ ತಮ್ಮನ್ನೂ ರೂಪಿಸಿದ ಹೆತ್ತವರ ಬಗ್ಗೆ ಅದಕ್ಕಿಂತಲೂ ಹೆಚ್ಚಿನ ಪೂಜ್ಯ ಭಾವನೆ ಇದ್ದಾಗ ಮಾತ್ರ ಜೀವನದಲ್ಲಿ ಯಶಸ್ಸಾಗುತ್ತದೆಎಂದು 108 ಪ್ರಸಂಗ ಸಾಗರ ಮುನಿಮಹಾರಾಜ್ ಹೇಳಿದರು. ಅವರು ಶನಿವಾರ ಸಂಜೆ ಇಲ್ಲಿನ ಮಹಾವೀರ ಭವನದಲ್ಲಿ ಅಮೃತವಚನ ಸಮಾರಂಭದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಪ್ರವಚನ ನೀಡಿದರು.
ಬದುಕಿನಲ್ಲಿ ಏನನ್ನಾದರೂ ಖರೀದಿಸಬಹುದು. ಆದರೆ ಹೆತ್ತವರನ್ನು ಖರೀದಿಸಲಾಗದು. ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ಸಿಗಬೇಕಾದರೆ ಸಾಕು ಎನ್ನಬೇಕೇ ಹೊರತು ಬೇಕು ಎನ್ನುವ ಮನೋಭಾವ ಸಲ್ಲದು ಎಂದ ಅವರು ಸಮಾಜದಲ್ಲಿ ಕೋಗಿಲೆಯಾಗಬೇಕೇ ಹೊರತು ಕಾಗೆಗಳಾಂತಾಗಬಾರದು. ಅದೇ ಅಹಿಂಸೆ ಮತ್ತು ಅಹಿಂಸೆಯೇ ಪರಮಧರ್ಮ ಎಂದರು.
ಮೂಡುಬಿದಿರೆ ಶ್ರೀ ಜೈನಮಠದ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿಯವರು ಆಶೀರ್ವಚನ ನೀಡಿ ಪಂಚೇಂದ್ರಿಯಗಳಿದ್ದರೂ ಬುದ್ಧಿ ಇಲ್ಲದೇ ನಾಶವಾಗುವ ಬದಲಾಗಿ ಆತ್ಮ,ಸಮಾಜ, ವಿಶ್ವ ಧರ್ಮ ಗೌರವಿಸಿ ಗುರುವಿನ ಮೂಲಕ ಸಂಸ್ಕಾರ ಪಡೆದು ಚೈತನ್ಯವನ್ನು ಜಾಗೃತಗೊಳಿಸುವುದು ಅಗತ್ಯವೆಂದರು.
ಆಲಂಗಾರ್ ಚರ್ಚ್ ಧರ್ಮಗುರುಗಳಾದ ರೆ.ಫಾ. ಬೇಸಿಲ್ ವಾಸ್ ಉಪಸ್ಥಿತರಿದ್ದರು.
ಬಿ.ರಾಜಶ್ರೀಯವರ ಪ್ರಾರ್ಥನೆ, ಪೂನಾದ ರೇಣುಕಾ ಕೊಠಾಡಿಯಾ ಅವರ ಮಂಗಲಾಚರಣೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಬಾಹುಬಲಿ ಪ್ರಸಾದ್ ಸ್ವಾಗತಿಸಿದರು. ಶ್ರೀ ಮಠದ ವತಿಯಿಂದ ಗುರುಗಳ ಪಾದಪೂಜೆ ನಡೆಯಿತು. ಜಿನವಾಣಿ ಶಾಸ್ತ್ರದಾನ, ಮಂಗಲಾರತಿ ಮೊದಲಾದ ವಿಧಿವಿಧಾನಗಳು ಜರಗಿದವು. ಪಟ್ನ ಶೆಟ್ಟಿ ಸುಧೇಶ್ ಕುಮಾರ್ ಹಾಗೂ ಬಸದಿಗಳ ಮೊಕ್ತೇಸರ ದಿನೇಶ್ ಆನಡ್ಕ ಮುನಿಗಳನ್ನು ಗೌರವಿಸಿದರು. ಕೆ.ಕೃಷ್ಣರಾಜ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು.
ಜೀವನದಲ್ಲಿ ಬಾಲ್ಯದಲ್ಲಿ ಮಾ(ತಾಯಿ) ಯೌವನದಲ್ಲಿ ಸರಿದಾರಿಗೆ ಬರಲು ಮುನಿಗಳ/ಗುರುಗಳ ಸತ್ಸಂಗ, ಹಾಗೂ ಕೊನೆಯಲ್ಲಿ ಪರ’ಮಾ’ತ್ಮ ನ ಧ್ಯಾನ ಅಗತ್ಯವಾಗಿ ಬೇಕಾಗುತ್ತದೆ. ವ್ಯಾವಹಾರಿಕವಾಗಿ ಮತ್ತೂ ಮಾಲ್‍ಗಳ ಬಗ್ಗೆ ಯೋಚಿಸದೇ ಮಾಲೆ ಹಿಡಿದು ಜಪತಪದತ್ತ ಗಮನ ಹರಿಸುವ ಅಗತ್ಯವಿದೆ. ತಮ್ಮ ಸೊಸೆ ಸೀತೆಯಂತಿರಬೇಕು ಎನ್ನುವವರು ತಾವು ಕೌಸಲ್ಯೆಯಾಗಬೇಕು. ಮಗ ರಾಮನಂತಿರಬೇಕಾದರೆ ಅಪ್ಪ ದಶರಥನಂತಿರಬೇಕು. ಪುರುಷರು ಕುಟುಂಬಿಕರಿಗಾಗಿ ಕೃಷ್ಣನಂತೆ ,ಮರ್ಯಾದೆಯ ವಿಷಯದಲ್ಲಿ ರಾಮನಂತೆ, ಆಧ್ಯಾತ್ಮಿಕ ಲಾಭಕ್ಕಾಗಿ ಮಹಾವೀರನಂತಿರಬೇಕು. ಮಹಿಳೆಯರು ಸಂಸ್ಕಾರ ನೀಡುವುದಕ್ಕಾಗಿ ಸರಸ್ವತಿಯಂತೆ, ಅಭಿವೃದ್ಧಿಗಾಗಿ ಲಕ್ಷ್ಮಿ ಹಾಗೂ ಮನೆಮಂದಿ ದಾರಿ ತಪ್ಪಿದಾಗ ದುರ್ಗೆಯಂತಿರಬೇಕು ಎಂದ ಪ್ರಸಂಗ ಸಾಗರ ಮುನಿಮಹಾರಾಜ್ ತಾಯಿಗೆ ನಾಲ್ಕು ಮಕ್ಕಳನ್ನು ಸಾಕುವ ತಾಕತ್ತಿದ್ದರೂ ನಾಲ್ವರು ಮಕ್ಕಳಿಗೆ ತಮ್ಮ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಲಾಗದ ಪರಿಸ್ಥಿತಿ ದುರಂತವೇ ಸರಿ ಎಂದರು.
18

By suddi9

Leave a Reply

Your email address will not be published. Required fields are marked *